Advertisement

ಅಮೃತಪಾಲ್ ಸಿಂಗ್ ನೊಂದಿಗೆ ಪರಾರಿಯಾಗಿದ್ದ ಸಹಾಯಕನ ಬಂಧನ

02:30 PM Mar 31, 2023 | Team Udayavani |

ನವದೆಹಲಿ: ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದು, ಇದೆ ವೇಳೆ ಎರಡು ವಾರಗಳ ಹಿಂದೆ ಆತನೊಂದಿಗೆ ಪರಾರಿಯಾಗಿದ್ದ ಆಪ್ತ ಸಹಾಯಕ ಜೋಗಾ ಸಿಂಗ್ ನನ್ನು ಶುಕ್ರವಾರ ಪಂಜಾಬ್‌ನಲ್ಲಿ ಬಂಧಿಸಲಾಗಿದೆ. ಲೂಧಿಯಾನ ಸಮೀಪದ ಸೋನೆವಾಲ್ ನಲ್ಲಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

Advertisement

ಪೊಲೀಸರು ಅಮೃತಪಾಲ್ ಸಿಂಗ್ ಮತ್ತು ಆತನ ಖಲಿಸ್ಥಾನ್ ಪರ ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಮೇಲೆ ತನ್ನ ಶಿಸ್ತುಕ್ರಮವನ್ನು ಪ್ರಾರಂಭಿಸಿದಾಗ, ತನ್ನ ಚಾಲಕ ಜೋಗಾ ಸಿಂಗ್ ಮತ್ತು ಸಹಚರ ಪಪ್ಪಲ್ಪ್ರೀತ್ ಜೊತೆಗೆ ಪರಾರಿಯಾಗಿದ್ದ.

ಅಮೃತಪಾಲ್ ಸಿಂಗ್ ಪೊಲೀಸರನ್ನು ದಾರಿತಪ್ಪಿಸಲು ಜೋಗಾ ಸಿಂಗ್‌ಗೆ ಮೊಬೈಲ್ ಫೋನ್ ಆನ್ ಮಾಡಿ ಓಡುವಂತೆ ಕೇಳಿಕೊಂಡಿದ್ದ. ಪಂಜಾಬ್ ಪೊಲೀಸರು ಅಮೃತಪಾಲ್ ಸಿಂಗ್ ನ ಚಾಲಕನ ಫೋನ್ ಸಿಗ್ನಲ್ ಮೂಲಕ ಟ್ರ್ಯಾಕ್ ಮಾಡುತ್ತಿದ್ದರು. ಪೊಲೀಸರು ಜೋಗಾ ಸಿಂಗ್‌ಗೆ ಹಿಡಿಯಲು ಪ್ರಯತ್ನ ಮಾಡಿದಾಗ, ಅವನು ಒಬ್ಬನೇ ಇದ್ದು ಅಮೃತಪಾಲ್ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next