Advertisement
ಮಣಿಪಾಲ ರಜತಾದ್ರಿಯ ಉಡುಪಿ ಜಿ.ಪಂ.ನ ಡಾ| ವಿ. ಎಸ್. ಆಚಾರ್ಯ ಸಭಾಂಗಣ ದಲ್ಲಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ಯಲ್ಲಿ ಜರಗಿದ ಜಿ. ಪಂ. 7ನೇ ಸಾಮಾನ್ಯ ಸಭೆಯಲ್ಲಿ ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಳೆಗಾಲ ಮಳೆ ಮುಗಿದ ಬಳಿಕ ಮರಳುಗಾರಿಕೆ ನಡೆಸಲು ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳಿನ ವಲಯಗಳನ್ನು ಗುರುತಿಸಲಾಗಿದ್ದು, ಸರಕಾರ ಮರಳು ತೆಗೆಯಲು ವ್ಯವಸ್ಥೆ ಮಾಡಿ ಕೊಡಬೇಕಿದೆ. ಆದರೆ ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಕೋರ್ಟ್‌ತೀರ್ಪಿಗೆ ಕಾಯುತ್ತಿದ್ದೇವೆ ಎಂದರು.
ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ é ಪ್ರಕರಣ ಮತ್ತೆ ಮತ್ತೆ ಮರುಕಳಿಸು ತ್ತಿದ್ದರೂ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಸಂಪೂರ್ಣ ವಿಫಲವಾಗಿದೆ. ಗರ್ಭಿಣಿಗೆ ಚಿಕಿತ್ಸೆ ನಿರಾಕರಣೆ ಹಾಗೂ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿದ ಪ್ರಕರಣಗಳಲ್ಲಿ ಸಂಪೂರ್ಣ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದರೂ, ವಿರುದ್ಧ ಶಿಸ್ತುಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗುತ್ತಿಲ್ಲ. ಕರ್ತವ್ಯ ಲೋಪ ವೆಸಗಿ ದವರನ್ನು ತತ್‌ಕ್ಷಣ ಅಮಾನತು ಮಾಡಿ ಎಂದು ಎಂದು ಗೊಪಾಲ ಪೂಜಾರಿ ಒತ್ತಾಯಿಸಿದರು. ಪರಿಹಾರ ನೀಡಲು ನಿರ್ಣಯ
ತೈಲ ಪೈಪ್‌ಲೈನ್ ಸಂಬಂಧ ಪಾದೂರು- ಕಳತ್ತೂರಿ ನಲ್ಲಿ ಹೆಚ್ಚಿನ ಮನೆಗಳಿಗೆ ಹಾನಿ ಯಾಗಿದ್ದು, ಈಗಾ ಗಲೇ ಕೆಲವು ಮನೆಗಳಿಗೆ ಮಾತ್ರ ಪರಿಹಾರ ನೀಡಿದ್ದು, ಸಂತ್ರಸ್ತರಾಗಿರುವ ಎಲ್ಲರಿಗೂ ಪರಿಹಾರ ನೀಡಬೇಕು ಎಂದು ಸದಸ್ಯೆ ಶಿಲ್ಪಾ ಜಿ. ಸುವರ್ಣ ಪ್ರಸ್ತಾಪಿಸಿದರು. ಸಭೆಯಲ್ಲಿ ಈ ಸಂಬಂಧ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
Related Articles
Advertisement
“ಕರಾವಳಿಗೆ 100 ಹೊಸ ಬಸ್’ಉಡುಪಿ ಹಾಗೂ ದ.ಕ.ದಲ್ಲಿ ಸರಕಾರಿ ಬಸ್‌ಗಳಿಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಇನ್ನೂ ಹೆಚ್ಚಿನ ಬಸ್‌ಗಳಿಗೆ ಸದಸ್ಯರಿಂದ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾತನಾಡಿದ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿ ಉಭಯ ಜಿಲ್ಲೆಗಳಿಗೆ ದಾವಣಗೆರೆಯಲ್ಲಿ ಹೆಚ್ಚುವರಿಯಾಗಿ ಉಳಿದ 100 ಮಿನಿ ಬಸ್‌ಗಳನ್ನು ಶೀಘ್ರ ತರಿಸಲು ಕ್ರಮಕೈಗೊಳ್ಳಲಾಗುವುದು. ಬೇಡಿಕೆಗೆ ಅನುಗುಣವಾಗಿ ಪರ್ಮಿಟ್ ನೀಡಲು ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳ ಕಾರ್ಯವೈಖರಿ : ಡಿಸಿ ಗರಂ
ವಾರಾಹಿ ಬೆಳೆ ಹಾನಿ ಪರಿಹಾರ, ಕೆರೆ, ಬಾವಿಗಳಿಗೆ ಮಣ್ಣು ಬಿದ್ದಿರುವುದನ್ನು ತೆಗೆಯದ ಬಗ್ಗೆ ನಿಗಮದ ಸಹಾಯಕ ಎಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡ ಡಿಸಿ, ಮುಖ್ಯ ಎಂಜಿನಿಯರ್ ತಿಳಿಸದೆ ಸಭೆಗೆ ಗೈರಾಗಿರುವುದಕ್ಕೆ ಗರಂ ಆಗಿದ್ದು, ಇದೇನು ಸಾಮಾನ್ಯ ಸಭೆಯೋ ಅಥವಾ ಸಂತೆ, ಮಾರುಕಟ್ಟೆಯಾ? ಎಂದು ಪ್ರಶ್ನಿಸಿ ಅವರಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು. ಇದೇ ವೇಳೆ ಕುಂದಾಪುರ ಆಸ್ಪತ್ರೆಯಲ್ಲಿ ಹಾವು ಕಚ್ಚಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ವರದಿ ನೀಡದ ಬಗ್ಗೆ ಡಿಎಚ್‌ಒ ಅವರನ್ನು ತರಾಟೆಗೆ ತೆಗೆದುಕೊಂಡರು. ಒತ್ತಿನೆಣೆ: ಗುತ್ತಿಗೆದಾರರ ನಿರ್ಲಕ್ಷ é
ಒತ್ತಿನೆಣೆಯಲ್ಲಿ ಗುಡ್ಡ ಕುಸಿದು ರಾ. ಹೆದ್ದಾರಿ ಸಂಚಾರ ದುರವಸ್ಥೆಗೆ ಗುತ್ತಿಗೆದಾರರ ನಿರ್ಲಕ್ಷ éವೇ ಕಾರಣ. ಪೊಲೀಸರು 6 ತಿಂಗಳ ಹಿಂದೆಯೇ ಗುಡ್ಡ ಕುಸಿಯಲಿದೆ ಎಂದು ವರದಿ ನೀಡಿದ್ದಲ್ಲದೆ ಐಆರ್‌ಪಿ ಕಂಪೆನಿಯು ತಲ್ಲೂರಿನಿಂದ ಶಿರೂರಿನವರೆಗಿನ ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿಸುತ್ತಿದೆ ಎನ್ನುವ ಆರೋಪ ಸಭೆಯಲ್ಲಿ ಕೇಳಿ ಬಂತು.