Advertisement

BBMP: ಇನ್ಮುಂದೆ ಸಿಗರೇಟ್‌ ತುಂಡುಗಳ ಪ್ರತ್ಯೇಕ ಸಂಗ್ರಹ

12:05 PM Oct 07, 2024 | Team Udayavani |

ಬೆಂಗಳೂರು: ಸಿಗರೇಟ್‌ ಹಾಗೂ ಬೀಡಿ ತುಂಡುಗಳಲ್ಲಿ ಕೂಡ ಹಾನಿಕಾರಕ ರಾಸಾಯನಿಕ ಅಂಶಗಳಿದ್ದು, ಅವುಗಳು ಕೂಡ ಪರಿಸರ ಮೇಲೆ ಹಾನಿ ಉಂಟು ಮಾಡಲಿವೆ. ಈ ಹಿನ್ನೆಲೆಯಲ್ಲಿ ಆ ತುಂಡುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಬಿಬಿ ಎಂಪಿ ಯೋಜನೆ ರೂಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿದ್ದು, ಪ್ರಾಯೋಗಿಕವಾಗಿ ಕೆಲವು ಹಾಟ್‌ ಸ್ಪಾಟ್‌ ಪ್ರದೇಶಗಳಲ್ಲಿ ಡಸ್ಟ್‌ಬಿನ್‌ಗಳ ನಿರ್ಮಿರಿಸಲಾಗುತ್ತದೆ.

Advertisement

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2022ರಲ್ಲೇ ಸಿಗರೇಟ್‌ ಮತ್ತು ಬೀಡಿ ತುಂಡುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಸಂಬಂಧ ಮಾರ್ಗಸೂಚಿಯನ್ನು ಹೊರಡಿಸಿದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ವೈಜ್ಞಾನಿಕ ರೀತಿಯಲ್ಲಿ ಸಿಗರೇಟ್‌ ಮತ್ತು ಬೀಡಿ ತುಂಡುಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ನಡೆದಿಲ್ಲ. ಮಾರ್ಗಸೂಚಿ ಕೂಡ ಸರಿಯಾಗಿ ಪಾಲನೆ ಆಗುತ್ತಿಲ್ಲ. ಪಾಲಿಕೆ ವ್ಯಾಪ್ತಿಯ ಕೆಲವು ಹೋಟೆಲ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಟೀ ಅಂಗಡಿ ಸೇರಿದಂತೆ ಇನ್ನೂ ಕೆಲವು ಕಡೆ ಎಲ್ಲೆಂದರಲ್ಲಿ ಸಿಗರೇಟ್‌ ತುಂಡುಗಳನ್ನು ಬಿಸಾಡುವ ಪ್ರವೃತ್ತಿ ಮುಂದುವರಿದಿದೆ. ಕೆಲವರು ಚರಂಡಿಗೂ ಎಸೆಯುತ್ತಾರೆ. ಹೀಗೆ ಬಿಸಾಡುವ ಸಿಗರೆಟು ಮತ್ತು ಬೀಡಿ ತುಂಡುಗಳಲ್ಲಿ ಹಾನಿಕಾರಕ ರಾಸಾ ಯನಿಕ ಅಂಶಗಳು ಇರುವುದರಿಂದ ಅಂತರ್ಜಲ, ಮಣ್ಣು ಮತ್ತು ಪರಿಸರವನ್ನು ಕಲುಷಿತಗೊಳಿಸುತ್ತದೆ. ಭವಿಷ್ಯತ್ತಿನಲ್ಲಿ ಪರಿಸರದ ಮೇಲೂ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಅವುಗಳ ಸಮ ರ್ಪ ಕ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾಟ್‌ ಸ್ಪಾಟ್‌ ಪ್ರದೇಶಗಳಲ್ಲಿ ಡಸ್ಟ್‌ಬಿನ್‌: ಬಿಬಿಎಂಪಿ ಆರೋಗ್ಯ ಮತ್ತು ಘನತಾಜ್ಯ ವಿಲೇವಾರಿ ವಿಭಾಗಗಳು ಜಂಟಿಯಾಗಿ ಪ್ರಾಯೋ ಗಿಕ ಕಾರ್ಯಕ್ಕೆ ಯೋಜನೆ ರೂಪಿಸಿವೆ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಹೋಟೆಲ್‌ ಸೇರಿದಂತೆ ಹೆಚ್ಚಿನ ಜನನಿಬಿಡ ಪ್ರದೇಶಗಳಲ್ಲಿ ಸಿಗರೇಟ್‌ ತುಂಡುಗಳನ್ನು ಪ್ರತ್ಯೇಕವಾಗಿ ಹಾಕುವ ನಿಟ್ಟಿನಲ್ಲಿ ವಿಶೇಷ ಡಸ್ಟ್‌ ಬಿನ್‌ಗಳನ್ನು ಅಳವಡಿಕೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿವೆ. ಇದಕ್ಕಾ ಗಿಯೇ ಒಂದೆರಡು ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹಾಟ್‌ಸ್ಪಾಟ್‌ ಪ್ರದೇಶ ಗಳಲ್ಲಿ ಡಸ್ಟ್‌ ಬಿನ್‌ ಇರಿಸಿ ಸಿಗರೇಟ್‌ ತುಂಡಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಸಿಗರೇಟ್‌ ತುಂಡುಗಳನ್ನು ನಿರ್ಲಕ್ಷಿಸಿ ವಿಲೇ ವಾರಿ ಮಾಡುವುದರಿಂದ ಪರಿಸರಕ್ಕೆ ಆಗುವ ಅನಾಹುತಗಳನ್ನು ತಡೆಯಲು ಬಿಬಿಎಂ ಪಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮಾರ್ಗಸೂಚಿಯಂತೆ ಸಿಗರೇಟ್‌ ತುಂಡುಗಳ ಸಂಗ್ರಹಕ್ಕೆ ಸೂಕ್ಷ್ಮ ಯೋಜನೆ ರೂಪಿಸಿದೆ. ಈ ಯೋಜನೆ ಭಾಗವಾಗಿಯೇ ಸಿಗರೇಟ್‌ ತಯಾರಕ ಸಂಸ್ಥೆಗಳ ಜತೆಗೂ ಮಾತುಕತೆ ನಡೆಸಿದೆ ಎಂದು ಹೇಳಿದ್ದಾರೆ.

ಸಂಸ್ಕರಣೆ ಮೂಲಕ ಮರುಬಳಕೆ: ಸೂಕ್ಷ್ಮ ಯೋಜನೆಯ ಭಾಗವಾಗಿ ಬಿಬಿ ಎಂಪಿ ಸಿಗರೇಟ್‌ ತಯಾರಕ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದೆ. ಹಾಟ್‌ ಸ್ಪಾಟ್‌ಗಳಲ್ಲಿ ಪ್ರತ್ಯೇಕ ಡಸ್ಟ್‌ ಬಿನ್‌ಗಳನ್ನು ಇರಿಸುತ್ತದೆ. ನಂತರ ತುಂಡುಗಳನ್ನು ತ್ಯಾಜ್ಯದಿಂದ ಶಕ್ತಿ ಅಥವಾ ಸಹ-ಸಂಸ್ಕರಣೆ ಮೂಲಕ ಮರುಬಳಕೆ ಮಾಡಲಾಗುತ್ತದೆ. ಸಿಗರೇಟ್‌ ತುಂಡುಗಳನ್ನು ಮರು ಬಳಕೆ ಮಾಡುವ ಜವಾಬ್ದಾರಿ ತಯಾರಕರ ಮೇಲಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಬಿಬಿಎಂಪಿ ಸಿಗರೇಟ್‌ ತಯಾರಿಕಾ ಸಂಸ್ಥೆಯ ಜತೆ ಮಾತುಕತೆ ನಡೆಸಿದೆ.

Advertisement

ಸಭೆಯಲ್ಲಿ ಸಿಗರೇಟ್‌ ತುಂಡಗಳ ಮರು ಬಳಕೆ ಸಂಬಂಧ ಒಪ್ಪಿಗೆ ನೀಡಿದ್ದಾರೆ. 2 ವಾರ್ಡ್‌ಗಳಲ್ಲಿ ಪ್ರಾಯೋಗಿಕ ವಾಗಿ ಸಿಗರೇಟ್‌ ತುಂಡು ವಿಲೇ ವಾರಿಗೆ ಕ್ರಮ ಕೈಗೊಳ್ಳುವಂತೆ ಸಿಗರೇಟ್‌ ತಯಾರಿಕಾ ಸಂಸ್ಥೆ ಐಟಿಸಿಗೆ ಪತ್ರ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏಕೆ ಯೋಜನೆ?: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಸಿಗರೇಟ್‌ ಮತ್ತು ಬೀಡಿ ತುಂಡುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತಂತೆ ಕೆಲವು ಮಾರ್ಗಸೂಚಿ ರೂಪಿಸಿದೆ. ಅವುಗಳನ್ನು ನಗರದಲ್ಲಿ ಪಾಲಿಸಲು ಬಿಬಿಎಂಪಿ ಈ ಯೋಜನೆ ರೂಪಿಸಿದೆ. ಎಲ್ಲೆಲ್ಲಿ ಡಸ್ಟ್‌ ಬಿನ್‌? ನಗರದಲ್ಲಿನ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಹೋಟೆಲ್‌ ಸೇರಿದಂತೆ ಹೆಚ್ಚಿನ ಜನನಿಬಿಡ ಪ್ರದೇಶಗಳಲ್ಲಿ ಡಸ್ಟ್‌ಬಿನ್‌ಗಳನ್ನು ಅಳವಡಿಸಲಾಗಿದೆ. ಇದಕ್ಕೆ ಪ್ರಾಯೋಗಿಕ ವಾಗಿ ಎರಡು ವಾರ್ಡ್‌ಗಳನ್ನು ಬಿಬಿಎಂಪಿ ಅಧಿಕಾರಿಗಳು ಆಯ್ಕೆ ಮಾಡಿಕೊಂಡಿದ್ದಾರೆ.

ಸಿಗರೇಟ್‌ ತುಂಡುಗಳನ್ನು ಪ್ರತ್ಯೇಕ ರೀತಿಯಲ್ಲಿ ಸಂಗ್ರಹಿಸುವ ನಿಟ್ಟಿನಲ್ಲಿ ಪಾಲಿಕೆ ಯೋಜನೆ ರೂಪಿಸಲಿದೆ. ಹಾಟ್‌ ಸ್ಪಾಟ್‌ ಸ್ಥಳಗಲ್ಲಿ ಡಸ್ಟ್‌ ಬಿನ್‌ಗಳನ್ನು ಇರಿಸಿ ಪ್ರತ್ಯೇಕವಾಗಿ ಸಿಗರೇಟ್‌ ತುಣುಕುಗಳನ್ನು ಸಂಗ್ರಹಿಸುವ ಪ್ರಾಯೋಗಿಕ ಕೆಲಸ ನಡೆಯಲಿದೆ. ಇದಕ್ಕಾಗಿ ಬಿಬಿಎಂಪಿ 2 ವಾರ್ಡ್‌ಗಳನ್ನು ಆಯ್ಕೆ ಮಾಡಲಿದೆ. ಡಾ. ಸೈಯದ್‌ ಸಿರಾಜುದ್ದೀನ್‌ ಮದನಿ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ. 

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next