Advertisement

ನಗರದ ಅಭಿವೃದ್ಧಿಗೆ ಸ್ಪಂದಿಸಿದ ಸೆಂಥಿಲ್‌

10:50 PM Sep 06, 2019 | mahesh |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಶಶಿಕಾಂತ್‌ ಸೆಂಥಿಲ್‌ ಅವರು ಎರಡು ವರ್ಷಗಳಲ್ಲಿ ಮಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಗೂ ಹಲವಾರು ಹೊಸ ಚಿಂತನೆಗಳನ್ನು ಹುಟ್ಟು ಹಾಕಿದ್ದು, ಅವುಗಳಲ್ಲಿ ಕೆಲವೊಂದನ್ನು ಕಾರ್ಯರೂಪಕ್ಕೆ ತಂದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಅವರು ತನ್ನ ಹುದ್ದೆಗೆ ಹಠಾತ್‌ ಆಗಿ ರಾಜೀನಾಮೆ ನೀಡಿರುವುದು ಜನತೆಯಲ್ಲಿ ಬೇಸರ ಮೂಡಿಸಿದೆ.

Advertisement

ಕಳೆದ ವರ್ಷ ನಗರದಲ್ಲಿ ಉಂಟಾದ ಕೃತಕ ನೆರೆಯಿಂದ ಆದ ಆವಾಂತರಗಳನ್ನು ನಿಭಾಯಿಸಿದ್ದ ರೀತಿ, ಈ ವರ್ಷ ಡೆಂಗ್ಯೂ ಹಾವಳಿಯನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳು, ಸ್ಮಾರ್ಟ್‌ ಸಿಟಿ ಪರಿಕಲ್ಪನೆ, ನದಿ ಉತ್ಸವಗಳಂತಹ ಹಲವಾರು ಜನಪರ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವ ಹಿಸಿದ ಬಗೆ ನಗರದ ಜನತೆಯಲ್ಲಿ ಸೆಂಥಿಲ್‌ ಬಗ್ಗೆ ಗೌರವ-ಪ್ರೀತಿಯನ್ನು ಹೆಚ್ಚಿಸಿತ್ತು.

ನದಿ ಉತ್ಸವ ಡಿಸಿ ಕನಸಿನ ಕೂಸು
ಈ ವರ್ಷದ ಆರಂಭದಲ್ಲಿ ನಗರದಲ್ಲಿ ಆಯೋಜಿ ಸಿದ್ದ ನದಿ ಉತ್ಸವ ಅತ್ಯಂತ ಯಶಸ್ವಿಯಾಗಿತ್ತು. ಈ ಕಲ್ಪನೆ ಸೆಂಥಿಲ್‌ ಅವರ ಕನಸಿನ ಕೂಸಾಗಿತ್ತು. ದಕ್ಷಿಣ ಕನ್ನಡ ಮಾತ್ರವಲ್ಲದೆ ಕರ್ನಾಟಕದ ಕರಾವಳಿಯಲ್ಲಿ ಹಿನ್ನೀರು ಪ್ರವಾಸೋದ್ಯಮಕ್ಕೆ ಇರುವ ವಿಪುಲ ಅವಕಾಶಗಳನ್ನು ತೆರೆದಿಡುವ ಪ್ರಯತ್ನವನ್ನು ನದಿ ಉತ್ಸವ ಮಾಡಿತ್ತು. ನದಿ ಉತ್ಸವದ ವಿಶೇಷತೆ ಅಂದರೆ ಯಾವುದೇ ಖಾಸಗಿ ಸಂಸ್ಥೆಗಳಿಗೆ ಉತ್ಸವ ಆಯೋಜನೆಯನ್ನು ವಹಿಸಿ ಕೊಡದೆ ಸರಕಾರಿ ಇಲಾಖೆಗಳ ಸಂಯೋಜನೆಯಲ್ಲೇ ಆಯೋಜನೆ ಮಾಡಿರುವುದು.

ಉತ್ಸವದ ಯಶಸ್ವಿನ ಬಳಿಕ ಜಿಲ್ಲಾಧಿಕಾರಿಗಳು ಶಾಶ್ವತ ಮತ್ತು ಸುಸಜ್ಜಿತ ಜೆಟ್ಟಿಗಳ ನಿರ್ಮಾಣಗಳ ಪ್ರಸ್ತಾವನೆಗಳನ್ನು ಸರಕಾರಕ್ಕೆ ಸಲ್ಲಿಸಿದ್ದರು.

ಮಂದಾರ ತ್ಯಾಜ್ಯ ಸಂತ್ರಸ್ತರಿಗೆ ಸ್ಪಂದನೆ
ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ಕಸದ ತ್ಯಾಜ್ಯ ಮಂದಾರ ಪ್ರದೇಶಕ್ಕೆ ಜಾರಿ ಸಾವಿರಾರು ಅಡಿಕೆ, ತೆಂಗು ಸಹಿತ ವಿವಿಧ ಜಾತಿಯ ಮರಗಳು ಧರಾಶಾಯಿಯಾಗಿ, ಹಲವು ಮನೆಗಳಿಗೆ ಸಮಸ್ಯೆ ಎದುರಾಗಿದ್ದ ಘಟನೆಯನ್ನು ಸಮರ್ಥವಾಗಿ ನಿಭಾ ಯಿಸಿದ್ದರು.

Advertisement

ಡೆಂಗ್ಯೂ ಹಾವಳಿ ತಡೆಗಟ್ಟಲು ಅವಿರತ ಶ್ರಮ
ಕೆಲವು ತಿಂಗಳಲ್ಲಿ ಜಿಲ್ಲೆಯಲ್ಲಿ ವ್ಯಾಪಿಸಿದ್ದ ಡೆಂಗ್ಯೂ ಹಾವಳಿಯನ್ನು ನಿಯಂತ್ರಣಕ್ಕೆ ತರಲು ಆರೋಗ್ಯ ಇಲಾಖೆಯೊಂದಿಗೆ ಜಿಲ್ಲಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಕಟ್ಟು ನಿಟ್ಟಿನ ಕ್ರಮಕ್ಕಾಗಿ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಂಡ ರೀತಿ ಶ್ಲಾಘನೀಯ. ಅದರಲ್ಲಿಯೂ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿರುವವರ ಮೇಲೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸುವ ಮೂಲಕ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮ ಜರಗಿಸುವುದಕ್ಕೆ ಆದೇಶಿಸಿದ್ದು ಅವರ ಕಾರ್ಯವೈಖರಿಗೆ ಇನ್ನೊಂದು ನಿದರ್ಶನ. ಸೊಳ್ಳೆಗಳ ನಿಯಂತ್ರಣಕ್ಕಾಗಿ ಲಾರ್ವಾ ಡೇ ಆಂದೋಲನ, ಶಾಲಾ ಮಕ್ಕಳಿಗೆ ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳ ಆಯೋಜನೆ ಕೂಡ ಮಾಡಿ ಜನರಲ್ಲಿ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು.

 ರಾಜೀನಾಮೆ ಬೇಸರ ತರಿಸಿದೆ
ಮಂದಾರದ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಸೆಂಥಿಲ್‌ ವಿಶೇಷ ಆದ್ಯತೆಯ ಕಾರ್ಯಗಳನ್ನು ಮಾಡಿದ್ದಾರೆ. ನಮಗೆ ಪುನರ್ವಸತಿ ಪ್ರಕ್ರಿಯೆ ಆರಂಭವಾಗುವ ಮೊದಲೇ ಜಿಲ್ಲಾಧಿಕಾರಿ ರಾಜೀನಾಮೆ ನೀಡಿದ್ದು, ನಮಗೆ ಬೇಸರ ತರಿಸಿದೆ.
– ಉದಯಕುಮಾರ್‌ ಕುಡುಪು, ಸ್ಥಳೀಯರು

 ಸಾಂಘಿಕ ವ್ಯವಸ್ಥೆ ನಿರ್ಮಾಣ, ಪ್ರೇರಣೆಯ ಪ್ರತೀಕ
ನಗರದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈವರೆಗೆ ಬೀಚ್‌, ದೇವಸ್ಥಾನ, ಪ್ರೇಕ್ಷಣೀಯ ಸ್ಥಳಗಳಿಗೆ ಒತ್ತು ನೀಡಲಾಗಿತ್ತು. ಆದರೆ ಸೆಂಥಿಲ್‌ ಅವರು ನದಿ ತೀರಗಳ ಬಳಕೆಯ ಯೋಜನೆಯನ್ನು ಜಾರಿಗೆ ತಂದರು. ನದಿ ಉತ್ಸವಕ್ಕಾಗಿ ಸಾಂಘಿಕ ವ್ಯವಸ್ಥೆ ನಿರ್ಮಾಣ ಮಾಡಿದ್ದರು.
– ಯತೀಶ್‌ ಬೈಕಂಪಾಡಿ,
ಪಣಂಬೂರು ಬೀಚ್‌ ಅಭಿವೃದ್ಧಿ ಯೋಜನೆಯ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next