Advertisement

ಆಟೋ ಚಾಲಕನ ಕೊಂದಿದ್ದವಗೆ ಜೀವಾವಧಿ ಶಿಕ್ಷೆ

03:43 PM Oct 18, 2021 | Team Udayavani |

ಚಿತ್ರದುರ್ಗ: ಆಟೊ ಚಾಲಕನನ್ನು ಕೊಲೆ ಮಾಡಿ ರೈಲ್ವೆ ಹಳಿಯ ಮೇಲೆ ಬಿಸಾಡಿದ ಪರಶುರಾಮಎಂಬಾತನಿಗೆ ಒಂದನೇಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವ ಧಿ ಶಿಕ್ಷೆ ವಿಧಿ ಸಿ ತೀರ್ಪು ನೀಡಿದೆ.

Advertisement

2018ರ ಜೂನ್‌ 24 ರಂದು ಹೊಳಲ್ಕೆರೆ ಹಾಗೂ ರಾಮಗಿರಿ ರೈಲ್ವೆ ನಿಲ್ದಾಣದ ನಡುವೆ ಆಟೋ ಚಾಲಕ ಶಿವರಾಜ ಎಂಬಾತನಕೊಲೆ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬನ್ನಿಕಟ್ಟಿ ಆರ್‌. ಹನುಮಂತಪ್ಪ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.

ಶಿವರಾಜ ಆಟೋದಲ್ಲಿ ಪರಶುರಾಮಪ್ರಯಾಣ ಮಾಡುತ್ತಿದ್ದ. ಇಬ್ಬರೂ ಮಾತನಾಡುತ್ತಿರುವಾಗ ಪರಶುರಾಮನ ಪತ್ನಿಯ ಬಗ್ಗೆಶಿವರಾಜ ಅಶ್ಲೀಲವಾಗಿ ಮಾತನಾಡಿದ್ದ. ಇದರಿಂದ ಕುಪಿತಗೊಂಡಪರಶುರಾಮ ಕೊಲೆಗೆ ಸಂಚು ರೂಪಿಸಿ ಆಟೋವನ್ನು ನಿರ್ಜನಪ್ರದೇಶದತ್ತ ಕರೆದೊಯ್ದು ಮೂತ್ರ ವಿಸರ್ಜನೆಯ ನೆಪದಲ್ಲಿ ಆಟೋವನ್ನು ನಿಲ್ಲಿಸಿದ್ದಾನೆ. ಕಬ್ಬಿಣದ ರಾಡಿನಿಮದ ಆಟೋಚಾಲಕನ ತಲೆಗೆ ಹೊಡೆದು ಕೊಲೆ ಮಾಡಿದ್ದ. ಆಟೋ ಚಾಲಕ ರೈಲಿಗೆ ಸಿಲುಕಿ ಮೃತಪಟ್ಟಿರುವಂತೆ ಬಿಂಬಿಸಲು ಹಳಿಮೇಲೆ ಹಾಕಿದ್ದಾನೆ. ಕೊಲೆಗೆ ಬಳಸಿದ ಕಬ್ಬಿಣದ ರಾಡನ್ನು ಪೊದೆಯೊಂದರಲ್ಲಿ ಬಿಸಾಡಿ ಪರಾರಿಯಾಗಿದ್ದ.

ಅಪರಿಚಿತ ಮೃತದೇಹ ಪತ್ತೆಯಾದ ಪ್ರಕರಣ ದಾಖಲಿಸಿಕೊಂಡ ದಾವಣಗೆರೆರೈಲ್ವೆ ಪೊಲೀಸರು ತನಿಖೆ ನಡೆಸಿದಾಗ ಕೊಲೆಯ ಸಂಗತಿ ಬೆಳಕಿಗೆಬಂದಿತ್ತು. ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎನ್‌.ಎಸ್‌. ಮಲ್ಲಯ್ಯ ಸರ್ಕಾರದ ಪರ ವಾದ ಮಂಡಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next