Advertisement

ದಲೆರ್‌ ಮೆಹೆಂದಿಗೆ ಎರಡು ವರ್ಷ ಜೈಲು ಶಿಕ್ಷೆ

06:00 AM Mar 17, 2018 | Team Udayavani |

ಪಟಿಯಾಲಾ: ಮಾನವ ಕಳ್ಳಸಾಗಣೆ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಪಂಜಾಬಿ ಗಾಯಕ ದಲೆರ್‌ ಮೆಹೆಂದಿಗೆ ಪಂಜಾಬ್‌ನ ಪಟಿಯಾಲದ ಸ್ಥಳೀಯ ಕೋರ್ಟ್‌ 2 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದೆ. ಇದರ ಜತೆಗೆ ಅವರ ಸಹೋದರ ಶಂಶೇರ್‌ ಸಿಂಗ್‌ ಅವರಿಗೂ ಕಠಿನ ಶಿಕ್ಷೆ ವಿಧಿಸಲಾಗಿದೆ. 

Advertisement

ತೀರ್ಪು ಪ್ರಕಟ ಆಗುತ್ತಿದ್ದಂತೆಯೇ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿ ದ್ದರು. ಕೂಡಲೇ ಸ್ಥಳೀಯ ಕೋರ್ಟ್‌ ಜಾಮೀನನ್ನೂ ನೀಡಿದೆ. ಬಳಿಕ ಮಾತನಾಡಿದ ಪಂಜಾಬಿ ಗಾಯಕ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. 

1998 ಮತ್ತು 1999ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ಮೂವರು ಯುವತಿಯರನ್ನು ಉದ್ದೇಶ ಪೂರ್ವಕವಾಗಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಬಿಟ್ಟು ಬಂದಿದ್ದರು ಎಂದು ಆರೋಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next