Advertisement

ಸೆನ್ಸೆಕ್ಸ್‌ ಏರಿಕೆ: ಹೂಡಿಕೆದಾರರ ಮೊಗದಲ್ಲಿ ನಗು

01:43 AM Apr 01, 2023 | Team Udayavani |

ಮುಂಬಯಿ: 2022-23ರ ಹಣ ಕಾಸು ವರ್ಷದ ಕೊನೆಯ ದಿನವಾದ ಶುಕ್ರವಾರ ಷೇರುಪೇಟೆ ಹೂಡಿಕೆದಾರರ ಮೊಗದಲ್ಲಿ ನಗು ಕಂಡುಬಂದಿದೆ. ಹಲವು ದಿನಗಳ ನಿರಾಸೆಯೆಲ್ಲ ಕರಗಿ, ಹೊಸ ಭರವಸೆಯೊಂದಿಗೆ 2023-24 ಅನ್ನು ಸ್ವಾಗತಿಸಿದ್ದಾರೆ. ಇದಕ್ಕೆ ಕಾರಣ ಷೇರುಪೇಟೆ ಸೆನ್ಸೆಕ್ಸ್‌ ಶೇ.2ರಷ್ಟು ಏರಿಕೆ ಕಂಡಿದ್ದು!

Advertisement

ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿರತೆ, ರಿಲಯನ್ಸ್‌ ಇಂಡಸ್ಟ್ರೀಸ್‌ ಸಹಿತ ಕೆಲವು ಷೇರುಗಳ ಭಾರೀ ಖರೀದಿ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆಯ ಹರಿವು ಹೆಚ್ಚಿದ ಕಾರಣ ಶುಕ್ರವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,031.43 ಅಂಕ ಏರಿಕೆಯಾಗಿ, 58,991ರಲ್ಲಿ ಅಂತ್ಯಗೊಂಡಿತು. ನಿಫ್ಟಿ 279.05 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 17,359ರಲ್ಲಿ ವಹಿವಾಟು ಅಂತ್ಯಗೊಳಿಸಿತು.

ಸಣ್ಣ ಉಳಿತಾಯ: ಬಡ್ಡಿ ಏರಿಕೆ
ಹೊಸದಿಲ್ಲಿ: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಕೇಂದ್ರ ಸರಕಾರ ಶುಕ್ರವಾರ ಶೇ. 0.7ರ ವರೆಗೆ ಏರಿಕೆ ಮಾಡಿದೆ. ಪ್ರಸಕ್ತ ವರ್ಷದ ಎಪ್ರಿಲ್‌- ಜೂನ್‌ ತ್ತೈಮಾಸಿಕಕ್ಕೆ ಈ ಬಡ್ಡಿದರಗಳು ಅನ್ವಯವಾಗಲಿದೆ. ಪಿಪಿಎಫ್ ಮತ್ತು ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ಯನ್ನು ಕ್ರಮವಾಗಿ ಶೇ.7.1 ಮತ್ತು ಶೇ.4ರ ದರವನ್ನೇ ಉಳಿಸಿಕೊಳ್ಳಲಾಗಿದೆ.

ಎನ್‌ಎಸ್‌ಸಿಗೆ ಶೇ.7ರಿಂದ ಶೇ.7.5, ಸುಕನ್ಯಾ ಸಮೃದ್ಧಿಗೆ ಶೇ.7.6ರಿಂದ ಶೇ.8, ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಶೇ.8ರಿಂದ ಶೇ.8.2, ಕಿಸಾನ್‌ ವಿಕಾಸ್‌ ಪತ್ರಕ್ಕೆ ಶೇ.7.2ರಿಂದ ಶೇ.7.6ಕ್ಕೆ ಏರಿಕೆಯಾಗಿದೆ. ಪ್ರಮುಖ ಅಂಶವೆಂದರೆ ಕೆವಿಪಿಯಲ್ಲಿ ಮಾಡಿದ ಹೂಡಿಕೆ 120 ತಿಂಗಳ ಬದಲಾಗಿ 115 ತಿಂಗಳಲ್ಲಿ ಮೆಚೂÂರ್‌ ಆಗಲಿದೆ. ಮಾಸಿಕ ಇನ್‌ಕಂ ಸ್ಕೀಮ್‌ ಯೋಜನೆ ಬಡ್ಡಿ 30 ಮೂಲಾಂಶ ಹೆಚ್ಚಿಸಿದ್ದರಿಂದ ಶೇ.7.4 ಆಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next