ಮುಂಬಯಿ : ಬೆಳಗ್ಗಿನ ವಹಿವಾಟಿನಲ್ಲಿ 300 ಅಂಕಗಳ ಜಿಗಿತದೊಂದಿಗೆ ದಾಖಲೆಯ 40,000 ಅಂಕಗಳ ಮಟ್ಟವನ್ನು ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಅಂತಿಮವಾಗಿ 118 ಅಂಕಗಳ ನಷ್ಟದೊಂದಿಗೆ 39,714,29 ಅಂಕಗಳ ಮಟ್ಟಕ್ಕೆ ಕುಸಿದು ದಿನದ ವಹಿವಾಟನ್ನು ನಿರಾಶಾದಾಯಕವಾಗಿ ಮುಗಿಸಿತು.
ಇದೇ ರೀತಿ ಬೆಳಗ್ಗೆ 12,000 ಅಂಕಗಳ ದಾಖಲೆಯ ಮಟ್ಟ ಏರಿದ್ದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23.10 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,922.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಾರದ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್ ಈ ವಾರ 279.40 ಅಂಕಗಳನ್ನು ಗಳಿಸಿದೆ. ನಿಫ್ಟಿ 78.70 ಅಂಕಗಳನ್ನು ಗಳಿಸಿದೆ.
ಇಂದಿನ ಟಾಪ್ ಲೂಸರ್ ಎಸ್ ಬ್ಯಾಂಕ್ ಶೇ.4.27ರ ನಷ್ಟಕ್ಕೆ ಗುರಿಯಾಯಿತು. ಉಳಿದಂತೆ ಐಟಿಸಿ, ವೇದಾಂತ ಮತ್ತು ಮಹೀಂದ್ರ ಶೇರುಗಳು ಶೇ.3.61ರ ನಷ್ಟಕ್ಕೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,737 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,024 ಶೇರುಗಳು ಮುನ್ನಡೆ ಸಾಧಿಸಿದವು; 1,559 ಶೇರುಗಳು ಹಿನ್ನಡೆಗೆ ಗುರಿಯಾದವು; 154 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.