Advertisement

ಫ‌ಲ ನೀಡಿದ ನಿರ್ಮಲಾ ಔಷಧ

09:56 AM Aug 28, 2019 | mahesh |

ಮುಂಬೈ: ವಿದೇಶಿ ಹೂಡಿಕೆದಾರರ ಮೇಲೆ ಹೇರಲಾಗಿದ್ದ ಹೆಚ್ಚುವರಿ ಸರ್‌ಚಾರ್ಜ್‌ ರದ್ದು, ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 70 ಸಾವಿರ ಕೋಟಿ ರೂ.ಗಳ ಸಹಾಯ ಸೇರಿದಂತೆ ದೇಶದ ಆರ್ಥಿಕತೆ ಚೇತರಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ ಕ್ರಮಗಳು ಫ‌ಲ ನೀಡಿದ್ದು, ಈ ವಲಯದ ಷೇರುಗಳಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

Advertisement

ಇದಷ್ಟೇ ಅಲ್ಲ, ಸದ್ಯದಲ್ಲೇ ಚೀನಾ ಜತೆಗೆ ವ್ಯಾಪಾರ ಮಾತುಕತೆ ಆರಂಭಿಸಲಾಗುವುದು ಎಂದು ಜಿ7 ಶೃಂಗದ ವೇಳೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ ಹೇಳಿರುವುದೂ ಷೇರುಪೇಟೆಗೆ ವರದಾನವಾಗಿ ಪರಿಣಮಿಸಿದೆ. ಹೀಗಾಗಿ ಸೋಮವಾರ ಬಿಎಸ್‌ಇ, ನಿಫ್ಟಿ ಸೂಚ್ಯಂಕಗಳು ಪುಟಿದೆದ್ದಿವೆ.

ಸೋಮವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 3 ತಿಂಗಳಲ್ಲೇ ಅತ್ಯಧಿಕ ಅಂದರೆ 792 ಅಂಕ ಏರಿಕೆ ದಾಖಲಿಸಿ, ದಿನಾಂತ್ಯಕ್ಕೆ 37,494.12ರಲ್ಲಿ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ ಕೂಡ 228.50 ಅಂಕ ಏರಿಕೆ ಕಂಡು ದಿನದಂತ್ಯಕ್ಕೆ 11,057.85 ಅಂಕಕ್ಕೆ ವಹಿವಾಟು ಮುಕ್ತಾಯ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next