Advertisement

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 984 ಅಂಕ ಕುಸಿತ, 14,650ಕ್ಕೆ ಇಳಿದ ನಿಫ್ಟಿ

04:44 PM Apr 30, 2021 | Team Udayavani |

ಮುಂಬಯಿ: ಫೈನಾಶ್ಶಿಯಲ್ ಷೇರುಗಳ ತೀವ್ರ ಮಾರಾಟ ಹಾಗೂ ಏಷ್ಯನ್ ಈಕ್ವಿಟಿಯ ಋಣಾತ್ಮಕ ಟ್ರೆಂಡ್ ಹಿನ್ನೆಲೆಯಲ್ಲಿ ಮುಂಬಯಿ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ ಶುಕ್ರವಾರ ಬರೋಬ್ಬರಿ 984 ಅಂಕ ಕುಸಿತ ಕಂಡು ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.

Advertisement

ಇದನ್ನೂ ಓದಿ:ಲಾಕ್ ಡೌನ್ ಲೆಕ್ಕಿಸದೆ ಸಂತೆ ಮಾಡಲು ಬಂದ ವ್ಯಾಪಾರಿಗಳು : ಪೊಲೀಸರಿಂದ ತೆರವು

ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 983,58 ಅಂಕ ಕುಸಿತ ಕಂಡು 48,782.36 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 263.80 ಅಂಕ ಕುಸಿತವಾಗಿ 14,631.10ರ ಗಡಿಗೆ ಕುಸಿದಿದೆ.

ಭರ್ಜರಿ ಸೆನ್ಸೆಕ್ಸ್ ಇಳಿಕೆಯಿಂದ ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಎಚ್ ಯುಎಲ್, ಟಿಸಿಎಸ್ ಮತ್ತು ಮಾರುತಿ ಷೇರುಗಳು ನಷ್ಟ ಕಂಡಿದೆ.

ಮತ್ತೊಂದೆಡೆ ಒಎನ್ ಜಿಸಿ, ಸನ್ ಫಾರ್ಮಾ, ಡಾ.ರೆಡ್ಡೀಸ್ ಮತ್ತು ಬಜಾಜ್ ಆಟೋ ಷೇರುಗಳು ಲಾಭ ಗಳಿಸಿವೆ. ಶುಕ್ರವಾರ ಬೆಳಗ್ಗಿನ ವಹಿವಾಟಿನಲ್ಲಿಯೂ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 400 ಅಂಕ ಕುಸಿತ ಕಂಡಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next