Advertisement

ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ: 88 ಅಂಕಗಳ ಮುನ್ನಡೆ

08:55 AM Apr 10, 2019 | Sathish malya |

ಮುಂಬಯಿ : ವಹಿವಾಟುದಾರರು ಮತ್ತು ಹೂಡಿಕೆದಾರರು ಎಚ್ಚರಿಕೆಯ ನಡೆ ತೋರಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 36 ಅಂಕಗಳ ಅಲ್ಪ ಮುನ್ನಡೆ ದಾಖಲಿಸಿತು.

Advertisement

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಎರಡೇ ದಿನಗಳು ಬಾಕಿ ಇದ್ದು ಅದರೊಂದಿಗೆ ಕಂಪೆನಿಗಳ ವಾರ್ಷಿಕ ಫ‌ಲಿತಾಂಶಗಳ ಪ್ರಕಟನೆ ಆರಂಭವಾಗುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ ತೋರಿಬಂದಿದೆ.

ಇಂದು ಬೆಳಗ್ಗೆ 10.25ರ ಸುಮಾರಿಗೆ ಸೆನ್ಸೆಕ್ಸ್‌ 88.45 ಅಂಕಗಳ ಮುನ್ನಡೆಯನ್ನು ದಾಖಲಿಸಿ 38,788.98 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 16.90 ಅಂಕಗಳ ಮುನ್ನಡೆಯೊಂದಿಗೆ 11,621.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 8 ಪೈಸೆಗಳ ಹಿನ್ನಡೆಯನ್ನು ಕಂಡು 69.73 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ನಿನ್ನೆ ಸೋಮವಾರ ಒಂದೇ ದಿನ ಡಾಲರ್‌ ಎದುರು ರೂಪಾಯಿ 44 ಪೈಸೆಗಳ ಕುಸಿತವನ್ನು ದಾಖಲಿಸಿ 69.67 ರೂ. ಮಟ್ಟಕ್ಕೆ ಜಾರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next