ಮುಂಬಯಿ : ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಗುರುವಾರ ತನ್ನ ದ್ವೆ„ಮಾಸಿಕ ಹಣಕಾಸು ನೀತಿ ಪರಾಮರ್ಶೆ ವರದಿಯನ್ನು ಪ್ರಕಟಿಸಲಿರುವ ಕಾರಣ ಮುಂಬಯಿ ಶೇರು ಪೇಟೆ ಇಂದು ಬೆಳಗ್ಗಿನ ವಹಿವಾಟಿನಲ್ಲಿ ಹಿನ್ನಡೆಗೆ ಗುರಿಯಾಯಿತು.
ಕಳೆದ ಎರಡು ಬಾರಿಯ ಹಣಕಾಸು ನೀತಿಯಲ್ಲಿ ಆರ್‌ಬಿಐ ತಲಾ ಶೇ.0.25ರ ರಿಪೋ ಬಡ್ಡಿ ದರವನ್ನು ಇಳಿಸಿತ್ತು. ಈಗ ಮೂರನೇ ಬಾರಿಗೆ ಅದು ಶೇ.0.25ರ ಪ್ರಮಾಣದಲ್ಲಿ ಬಡ್ಡಿ ದರ ಇಳೀಸೀತು ಎಂಬ ವಿಶ್ವಾಸ ಶೇರು ಮಾರುಕಟ್ಟೆಯಲ್ಲಿ ಇದೆ.
ಈಚೆಗೆ ಪ್ರಕಟಗೊಂಡಿರುವ ಆರ್ಥಿಕ ಪ್ರಗತಿಯ ಅಂಕಿ ಅಂಶಗಳು ನಿರಾಶಾದಾಯಕವಾಗಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಬೇಕಾದ ಅಗತ್ಯವನ್ನು ಮನಗಂಡು ಆರ್‌ಬಿಐ ಈ ಬಾರಿಯೂ ಶೇ.0.25ರ ಪ್ರಮಾಣದಲ್ಲಿ ರಿಪೋ ಬಡ್ಡಿ ದರ ಇಳಿಸುವುದೆಂಬ ಆಶಯ ಶೇರು ಮಾರುಕಟ್ಟೆಯಲ್ಲಿದೆ.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 140.83 ಅಂಕಗಳ ನಷ್ಟದೊಂದಿಗೆ 39,942.71 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 63 ಅಂಕಗಳ ನಷ್ಟದೊಂದಿಗೆ 11,958.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬೆಳಗ್ಗಿನ ವಹಿವಾಟಿನ ಟಾಪ್ ಲೂಸರ್‌ಗಳಾದ ಎಸ್ ಬ್ಯಾಂಕ್, ಎಸ್‌ಬಿಐ, ಇಂಡಸ್ ಇಂಡ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ವೇದಾಂತ, ಐಸಿಐಸಿಐ ಬ್ಯಾಂಕ್, ಆರ್‌ಐಎಲ್, ಮಹೀಂದ್ರ ಮತ್ತು ಎಚ್ ಡಿ ಎಫ್ ಸಿ ಶೇರುಗಳು ಶೇ.2.91ರ ನಷ್ಟಕ್ಕೆ ಗುರಿಯಾದವು.
ಇದೇ ವೇಳೆ ಪವರ್ ಗ್ರಿಡ್, ಬಜಾಜ್ ಆಟೋ, ಎಚ್‌ಯುಎಲ್, ಕೋಲ್ ಇಂಡಿಯಾ, ಏಶ್ಯನ್ ಪೇಂಟ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಎಚ್ ಸಿ ಎಲ್ ಟೆಕ್ ಶೇರುಗಳು ಗಳಿಕೆಯೊಂದಿಗೆ ವ್ಯವಹಾರ ನಿರತವಾಗಿದ್ದವು. ನಿನ್ನೆ ಬುಧವಾರ ಶೇರು ಮಾರುಕಟ್ಟೆಗೆ ಈದ್ ಉಲ್ ಫಿತ್ರ ಪ್ರಯುಕ್ತ ರಜೆ ಇತ್ತು.
ಇಂದು ಡಾಲರ್ ಎದುರು ರೂಪಾಯಿಗ 13 ಪೈಸೆಗಳ ಇಳಿಕೆಯನ್ನು ಕಂಡು 69.39 ರೂ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಬ್ರೆಂಟ್ ಕಚ್ಚಾತೈಲ ಶೇ.0.23ರ ಏರಿಕೆಯೊಂದಿಗೆ ಬ್ಯಾರಲ್ ಗೆ 60.77 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.