Advertisement

ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ: 34 ಅಂಕ ಏರಿಕೆ

11:28 AM Feb 05, 2019 | |

ಮುಂಬಯಿ : ಆರ್‌ ಬಿ ಐ ದರ ನೀತಿ ಸಭೆ ಪ್ರಕೃತ ಜಾರಿಯಲ್ಲಿರುವ ಕಾರಣ ವಹಿವಾಟುದಾರರು ಮತ್ತು ಹೂಡಿಕೆದಾರರು ಸದ್ಯ ನೇಪಥ್ಯಕ್ಕೆ ಸರಿದಿರುವ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ವಹಿವಾಟಿನಲ್ಲಿ 34.07 ಅಂಕಗಳ ಮುನ್ನಡೆಯನ್ನು ದಾಖಲಿಸಿ 36,616.81 ಅಂಕಗಳ ಮಟ್ಟಕ್ಕೇರಿತು.

Advertisement

ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 22.10 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,934.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಟಾಪ್‌ ಗೇನರ್‌ಗಳಾಗಿ ಮೂಡಿ ಬಂದ ಹೀರೋ ಮೋಟೋ ಕಾರ್ಪ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಬಜಾಜ್‌ ಆಟೋ, ಮಾರುತಿ ಮತ್ತು ಮಹೀಂದ್ರ ಶೇರುಗಳು ಶೇ.2.66ರ ಏರಿಕೆಯನ್ನು ದಾಖಲಿಸಿದವು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು  2,709 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 859 ಶೇರುಗಳು ಮುನ್ನಡೆ ಸಾಧಿಸಿದವು; 1,703 ಶೇರುಗಳು ಹಿನ್ನಡೆಗೆ ಗುರಿಯಾದವು; 147 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next