ಮುಂಬಯಿ: ಜಿಡಿಪಿ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಸುದ್ದಿಯ ಬೆನ್ನಲ್ಲೇ ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಆತಂಕದ ಛಾಯೆ ಕವಿಯಿತು. ಬಿ.ಎಸ್.ಇ., ಎನ್.ಎಸ್.ಇ. ಷೇರುಗಳು 770 ಅಂಶಗಳಷ್ಟು ಕುಸಿತ ಕಂಡಿವೆ. ಷೇರು ಇಂಡೆಕ್ಸ್‌ನ ಪ್ರಮುಖ 30 ಷೇರುಗಳು ಕುಸಿತ ಕಂಡಿದ್ದರಿಂದ ಈ ಪತನಕ್ಕೆ ಕಾರಣವಾಗಿದೆ.
ಪ್ರಮುಖವಾಗಿ ಸಾರ್ವಜನಿಕ ರಂಗದ ಬ್ಯಾಂಕುಗಳು ಮತ್ತು ಆಟೋಮೊಬೈಲ್ ಕ್ಷೇತ್ರದ ಷೇರುಗಳಲ್ಲಿ ಕುಸಿತವಾಗಿದೆ.
ಕಾರ್ಪೋರೇಷನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಷೇರುಗಳು ಶೇ. 9.3ರಷ್ಟು ಇಳಿಕೆಯಾಗಿವೆ.
ಅತಿ ಹೆಚ್ಚು ಇಳಿಕೆ ಕಂಡ ಕಂಪೆನಿಗಳಲ್ಲಿ ಐಸಿಐಸಿಐ ಬ್ಯಾಂಕ್, ವೇದಾಂತ, ಎಚ್‌ಡಿಎಫ್ಸಿ, ಟಾಟಾ ಮೋಟಾರ್, ಟಾಟಾ ಸ್ಟೀಲ್, ಒಎನ್‌ಜಿಸಿ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಎಲ್ ಆ್ಯಂಡ್ ಟಿ ಸೇರಿವೆ. ಇವುಗಳ ಕುಸಿದ ಶೇ.4ರಷ್ಟಾಗಿತ್ತು.
ಇನ್ನು ಟೆಕ್ ಎಮ್, ಎಚ್‌ಸಿಎಲ್, ಟಿಸಿಎಸ್, ಇನ್ಫೋಸಿಸ್ ಷೇರುಗಳ ದರ ಶೇ.2ರಷ್ಟು ಏರಿಕೆಯಾಗಿದೆ.
ರೂಪಾಯಿ ಕೆಳಕ್ಕೆ
ರೂಪಾಯಿ ದರ ಇನ್ನಷ್ಟು ಕುಸಿತ ಕಂಡಿದೆ. 64 ಪೈಸೆಯಷ್ಟು ಇಳಿಕೆ ಕಂಡಿದ್ದು ಡಾಲರ್ ಒಂದಕ್ಕೆ 72.33 ರೂ. ಆಗಿದೆ.