Advertisement

ಹಳಿತಪ್ಪಿದ ಅಮೆರಿಕ-ಚೀನ ವಾಣಿಜ್ಯ ಮಾತುಕತೆ: ಮುಂಬಯಿ ಶೇರು 363 ಅಂಕ ಕುಸಿತ

09:02 AM May 07, 2019 | Sathish malya |

ಮುಂಬಯಿ : ಚೀನ – ಅಮೆರಿಕ ವಾಣಿಜ್ಯ ಸುಂಕ ಮಾತುಕತೆಗಳು ಬಹುತೇಕ ಮುರಿದು ಬಿದ್ದಿರುವ ಕಾರಣಕ್ಕೆ ಜಾಗತಿಕ ಶೇರು ಪೇಟೆಗಳಲ್ಲಿ ಭಾರೀ ಕುಸಿತ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಸೋಮವಾರ 362.92 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 38,600.34 ಅಂಕಗಳ ಮಟ್ಟದಲ್ಲಿ ಕಳವಳಕಾರಿಯಾಗಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 114 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,600 ಅಂಕಗಳಿಗಿಂತ ಕೆಳಮಟ್ಟದಲ್ಲಿ ಕೊನೆಗೊಳಿಸಿತು.

ಕಳೆದ ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಚೀನದಿಂದ ಆಮದಿಸಿಕೊಳ್ಳಲಾಗುವ 200 ಶತಕೋಟಿ ಡಾಲರ್‌ ಮೌಲ್ಯದ ಉತ್ಪನ್ನಗಳ ಮೇಲಿನ ಸುಂಕವನ್ನು ತಾನು ಈಗಿನ ಶೇ.10ರಿಂದ ಶೇ.25ಕ್ಕೆ ಏರಿಸುವುದಾಗಿ ಬೆದರಿಕೆ ಹಾಕಿದ್ದರು.

ಇಂದಿನ ಟಾಪ್‌ ಲೂಸರ್‌ಗಳ ಪೈಕಿ ಎಸ್‌ ಬ್ಯಾಂಕ್‌, ಟಾಟಾ ಮೋಟರ್‌, ಬಜಾಜ್‌ ಫಿನಾನ್ಸ್‌, ಟಾಟಾ ಸ್ಟೀಲ್‌, ಅವಳಿ ಎಚ್‌ ಡಿ ಎಫ್ ಸಿ, ಇಂಡಸ್‌ ಇಂಡ್‌ ಬ್ಯಾಂಕ್‌, ಆರ್‌ಐಎಲ್‌, ಬಜಾಜ್‌ ಆಟೋ, ಎನ್‌ಟಿಪಿಸಿ, ಎಚ್‌ಸಿಎಲ್‌ ಟೆಕ್‌, ಕೋಟಕ್‌ ಬ್ಯಾಂಕ್‌ ಮತ್ತು ಇನ್‌ಫೋಸಿಸ್‌ ಶೇರುಗಳು ಶೇ.5.30 ಕುಸಿದವು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,665 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 831 ಶೇರುಗಳು ಮುನ್ನಡೆ ಸಾಧಿಸಿದವು; 1,634 ಶೇರುಗಳು ಹಿನ್ನಡೆಗೆ ಗುರಿಯಾದವು; 200 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next