Advertisement

ಕಾಬೂಲ್ ಸೇನಾ ಆಸ್ಪತ್ರೆ ದಾಳಿ : ತಾಲಿಬಾನ್ ಕಮಾಂಡರ್ ಹಮ್ದುಲ್ಲಾ ಸೇರಿ 19 ಬಲಿ

11:33 AM Nov 03, 2021 | Team Udayavani |

ಕಾಬೂಲ್: ಅಫ್ಘಾನಿಸ್ತಾನದ ಅತೀ ದೊಡ್ಡ ಮಿಲಿಟರಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಭವಿಸಿದ ಎರಡು ಸ್ಫೋಟ ಹಾಗೂ ಗುಂಡಿನ ದಾಳಿಯಲ್ಲಿ ಕಾಬೂಲ್‌ನ ಹಿರಿಯ ತಾಲಿಬಾನ್ ಮಿಲಿಟರಿ ಕಮಾಂಡರ್ ಹಮ್ದುಲ್ಲಾ ಮೊಖ್ಲಿಸ್ ಸೇರಿದಂತೆ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.

Advertisement

ಕಾಬೂಲ್‌ನ ಸೇನಾ ಆಸ್ಪತ್ರೆಯ ಮೇಲೆ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಅಶ್ರಫ್ ಘನಿ ನೇತೃತ್ವದ ಸರಕಾರದ ಪತನದ ನಂತರ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಿತ್ತು , ಆ ಬಳಿಕ ಮಂಗಳವಾರದ ನಡೆದ ದಾಳಿಯು ಅಫ್ಘಾನಿಸ್ತಾನವನ್ನು ಬೆಚ್ಚಿಬೀಳಿಸಿತ್ತು.

ರಾಜಧಾನಿಯನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಹಕ್ಕಾನಿ ನೆಟ್‌ವರ್ಕ್‌ನ ಸದಸ್ಯ ಮತ್ತು ಬದ್ರಿ ಕಾರ್ಪ್ಸ್ ವಿಶೇಷ ಪಡೆಗಳ ಹಿರಿಯ ಅಧಿಕಾರಿ ಮೊಖ್ಲಿಸ್ ಹತ್ಯೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next