ಪಂಜಾಬ್: ಅರ್ಜುನ ಪ್ರಶಸ್ತಿ ಪುರಸ್ಕೃತ, ಪಂಜಾಬ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ದಲ್ಬೀರ್ ಸಿಂಗ್ ಡಿಯೋಲ್ ಅವರು ಸೋಮವಾರ ಜಲಂಧರ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಹೊಸ ವರ್ಷದ ದಿನದಂದು ಪಂಜಾಬ್‌ನ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಹೊಸ ವರ್ಷಾಚರಣೆಗೆಂದು ತೆರಳಿದ್ದ ದಲ್ಬೀರ್ ಸಿಂಗ್ ಡಿಯೋಲ್ ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಕುಟುಂಬದವರು ನಾಪತ್ತೆ ದೂರು ದಾಖಲಿಸಿದ್ದಾರೆ.
ಆದರೆ ಇಂದು ಬೆಳಿಗ್ಗೆ ಜಲಂಧರ್ ಪಟ್ಟಣದ ಹೊರವಲಯದಲ್ಲಿರುವ ಬಸ್ತಿ ಬಾವಾ ಖೇಲ್‌ನ ಕಾಲುವೆಯ ಬಳಿ ಶವ ಪತ್ತೆಯಾಗಿದ್ದು ದೇಹದ ಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ.
ಶನಿವಾರ ಸಂಜೆ ಸ್ನೇಹಿತರ ಜೊತೆ ಹೊಸ ವರ್ಷಾಚರಣೆಗೆಂದು ತೆರಳಿದ್ದ ಡಿಎಸ್‌ಪಿ ಮನೆಗೆ ವಾಪಸ್ಸಾಗಲಿಲ್ಲ ಎಂದು ಡಿಎಸ್‌ಪಿ ಕುಟುಂಬದವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ ಅದರಂತೆ ಇಂದು ಬೆಳಿಗ್ಗೆ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಲಾಗಿದ್ದು ವರದಿ ಬಂದ ಬಳಿಕ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಷ್ಯನ್ ಗೇಮ್ಸ್ ನಲ್ಲಿ ಡಿಯೋಲ್ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು ಅಲ್ಲದೆ 2000 ಇಸವಿಯಲ್ಲಿ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಹಲವು ಪದಕಗಳನ್ನು ಗೆದ್ದಿದ್ದ ದಲ್ಬೀರ್ ಸಿಂಗ್ ಡಿಯೋಲ್ ಅವರಿಗೆ ಅರ್ಜನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಇದನ್ನೂ ಓದಿ: Earthquake:ಸೆಂಟ್ರಲ್ ಜಪಾನ್ ನಲ್ಲಿ ಪ್ರಬಲ ಭೂಕಂಪ,7.6 ತೀವ್ರತೆ ದಾಖಲು;ಸುನಾಮಿ ಎಚ್ಚರಿಕೆ