Advertisement

ಹೆದ್ದಾರಿ ಪ್ರಾಧಿಕಾರಕ್ಕೆ ಹಿರಿಯ ಐಎಎಸ್‌ ಅಧಿಕಾರಿ ಅಲಕಾ ಉಪಾಧ್ಯಾಯ ಅಧ್ಯಕ್ಷೆ

01:28 AM Dec 06, 2021 | Team Udayavani |

ಹೊಸದಿಲ್ಲಿ: ಹಿರಿಯ ಐಎಎಸ್‌ ಅಧಿಕಾರಿ ಅಲಕಾ ಉಪಾಧ್ಯಾಯ ಅವರನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

Advertisement

ಇದರ ಜತೆಗೆ ಕೇಂದ್ರ ಸರಕಾರ ಇನ್ನೂ ಕೆಲವು ಪ್ರಮುಖ ಸಂಸ್ಥೆಗಳು, ಕಾರ್ಯದರ್ಶಿಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ಒಟ್ಟು 42 ಹುದ್ದೆಗಳಲ್ಲಿನ ಇಲಾಖಾ ಮುಖ್ಯಸ್ಥರು, ಕಾರ್ಯ  ದರ್ಶಿಗಳನ್ನು ಬದಲು ಮಾಡಿ ಆದೇಶ ಹೊರಡಿಸಿದೆ.

ಬಂದರು, ನೌಕಾಯಾನ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಸಂಜಯ ಬಂದೋಪಾಧ್ಯಾಯ ಅವರನ್ನು ಭಾರತದ ಒಳನಾಡು ಜಲಸಾರಿಗೆ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಇದನ್ನೂ ಓದಿ:ಕತ್ರೀನಾ – ವಿಕ್ಕಿ ಕೌಶಲ್‌ ವಿವಾಹ :7 ಶ್ವೇತ ವರ್ಣದ ಕುದುರೆ ಜತೆಗೆ ವಿಕ್ಕಿ ಕೌಶಲ್‌ ಬಾರಾತ್‌

ಐಎಎಸ್‌ ಅಧಿಕಾರಿ ಧರ್ಮೇಂದ್ರ ಎಸ್‌.ಗಂಗ್ವಾರ್‌ ಅವರನ್ನು ಗಡಿ ನಿರ್ವಹಣ ವಿಭಾಗದ ಕಾರ್ಯದರ್ಶಿ, ಸಂದೀಪ್‌ ಕುಮಾರ್‌ ನಾಯಕ್‌ ಅವರನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಮಂಡಳಿ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಉತ್ಪಾದಕತೆ ಮಂಡಳಿಯ ಮಹಾನಿರ್ದೇಶಕರನ್ನಾಗಿ ನೇಮಕ ಮಾಡ ಲಾಗಿದೆ. ಶ್ಯಾಮ್‌ ಮಿಶ್ರಾ ಅವರನ್ನು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next