ಮುಂಬಯಿ: ಶ್ರೀ ರಜಕ ಸಂಘ ಮುಂಬಯಿ ಇದರ 80ನೇ ವಾರ್ಷಿಕ ಮಹಾ ಸಭೆಯು ದಾದರ್ ಪೂರ್ವ ಕೊಹಿನೂರ್ ಭವನ್ ಸಭಾಗೃಹದಲ್ಲಿ ಜೂ. 11 ರಂದು ಜರಗಿತು.
ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಎಸ್. ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಆಚರಿಸಿದ ಸಂಸ್ಥೆಯ ಹಿರಿಯರಾದ ಎಲ್. ಪಿ. ಕುಂದರ್ ಮತ್ತು ಸುನಂದಾ ಎಲ್. ಕುಂದರ್ ಮತ್ತು ಸದಾನಂದ ಸಾಲ್ಯಾನ್ ಮತ್ತು ದೇವಕಿ ಸದಾನಂದ್ ದಂಪತಿಗಳನ್ನು ಸಂಘದ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಅಭಿನಂದಿಸಿ ಗೌರವಿಸಿದರು.
ರಜಕ ಸಂಘ ಮೂಲ್ಕಿ ಅಧ್ಯಕ್ಷ ಸಂಜೀವ ಮಡಿವಾಳ, ಹಿರಿಯ ಸದಸ್ಯರಾದ ಪಿ. ಎಂ. ಸಾಲ್ಯಾನ್, ಪಿ. ಕೃಷ್ಣ, ಎನ್. ಯು. ಕುಂದರ್, ಎಸ್. ಯು. ಕುಂದರ್, ಸಂಜೀವ ಎಂ. ಸಾಲ್ಯಾನ್, ಸುಂದರ್ ಪುತ್ರನ್, ನೀಲಯ್ಯ ಗುಜರನ್, ಅಶೋಕ್ ಕುಂದರ್, ಉಮೇಶ್ ಸಾಲ್ಯಾನ್, ಚಂದ್ರಹಾಸ ಗುಜರನ್, ಉಪಾಧ್ಯಕ್ಷ ದಾಸು ಸಿ. ಸಾಲ್ಯಾನ್, ಜೊತೆ ಕೋಶಾಧಿಕಾರಿ ಸುಭಾಷ್ ಸಾಲ್ಯಾನ್, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಿನಿ ಡಿ. ಗುಜರನ್, ಯುವ ವಿಭಾಗದ ಅಧ್ಯಕ್ಷ ಮನೀಷ್ ಕುಂದರ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸುಮಿತ್ರಾ ಡಿ. ಸಾಲ್ಯಾನ್, ಶಶಾಂಕ್ ಸಾಲ್ಯಾನ್, ಸಂಜೀವ್ ಎಕ್ಕಾರ್, ಭಾಸ್ಕರ್ ಕುಂದರ್, ಆಂತರಿಕ ಲೆಕ್ಕ ಪರಿಶೋಧಕರಾದ ಪೂವಣಿ ಸಾಲ್ಯಾನ್, ಸಿಎ ಪ್ರದೀಪ್ ಕುಂದರ್, ಕಾರ್ಯದರ್ಶಿ ಸುಮಿತ್ರಾ ಆರ್. ಪಲಿಮಾರ್, ಜೊತೆ ಕೋಶಾಧಿಕಾರಿ ಸಿಎ ವಿಜಯ್ ಕುಂದರ್ ಅವರು ಉಪಸ್ಥಿತರಿದ್ದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್