ಹೊಸದಿಲ್ಲಿ: ಹಿರಿಯ ರಾಜಕೀಯ ಧುರೀಣ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಪ್ರಮುಖ ಕಾರ್ಯದರ್ಶಿ ಸೀತಾರಾಂ ಯೆಚೂರಿ (Sitaram Yechury) ಅವರು ಗುರುವಾರ (ಸೆ.12) ನಿಧನರಾದರು.
ತೀವ್ರ ಉಸಿರಾಟದ ಸೋಂಕಿನಿಂದಾಗಿ ಅವರು ಆಗಸ್ಟ್ 19 ರಿಂದ ಏಮ್ಸ್‌ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಯೆಚೂರಿ ಅವರು 1952ರಲ್ಲಿ ಚೆನ್ನೈನಲ್ಲಿ ಸರ್ವೇಶ್ವರ ಸೋಮಾಯುಜಲಾ ಯೆಚೂರಿ ಮತ್ತು ಕಲ್ಪಕಮ್ ಯೆಚೂರಿ ದಂಪತಿಯ ಪುತ್ರನಾಗಿ ಜನಿಸಿದ್ದರು. ಹೈದರಾಬಾದ್ ನಲ್ಲಿ ಬೆಳೆದ ಅವರು ಶಾಲಾ ಶಿಕ್ಷಣ ಮುಗಿಸಿದ ಅವರು 1969ರಲ್ಲಿ ತೆಲಂಗಾಣ ಪ್ರತ್ಯೇಕತಾ ಹೋರಾಟ ಆರಂಭವಾದ ಬಳಿಕ ಹೊಸದಿಲ್ಲಿಗೆ ತೆರಳಿದರು. ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದ ಅವರು, ಬಳಿಕ ಜೆಎನ್ ಯು ನಲ್ಲಿ ಎಂ.ಎ ಪದವಿ ಪಡೆದರು. ಬಳಿಕ ಅಲ್ಲೇ ಪಿಎಚ್ ಡಿ ಆರಂಭಿಸಿತರಾದರೂ ತುರ್ತು ಪರಿಸ್ಥಿತಿಯ ಕಾರಣದಿಂದ ಅದನ್ನು ಪೂರ್ಣಗೊಳಿಸಲಾಗಲಿಲ್ಲ.
1970 ರ ದಶಕದಲ್ಲಿ, ಯೆಚೂರಿ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಮೂರು ಬಾರಿ ಸೇವೆ ಸಲ್ಲಿಸಿದರು, ಎಸ್‌ಎಫ್‌ಐ ಪ್ರತಿನಿಧಿಸಿದರು. 1984 ರ ಹೊತ್ತಿಗೆ, ಅವರು ಸಿಪಿಎಂನ ಕೇಂದ್ರ ಸಮಿತಿಗೆ ಆಯ್ಕೆಯಾದರು.