Advertisement

ಹಿರಿಯ ನಾಗರಿಕರಿಗಿದೆ ಉಚಿತ ಕಾನೂನು ನೆರವು ಸೌಲಭ್ಯ

02:01 PM Oct 14, 2018 | |

ಹುಮನಾಬಾದ: ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟ ಹಾಗೂ ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರು ಉಚಿತ ಕಾನೂನು ನೆರವಿನ ಸೌಲಭ್ಯದ ಪಡೆದು ಇಳಿ ವಯಸ್ಸಿನಲ್ಲಿರುವವರು ನೆಮ್ಮದಿ ಜೀವನ ಸಾಗಿಸಬೇಕು ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶ ಆಶೆಪ್ಪ ಬಿ. ಸಣ್ಮನಿ ಹೇಳಿದರು.

Advertisement

ಸ್ಥಳೀಯ ನ್ಯಾಯಾಲಯ ಪ್ರಾಂಗಣದ ವಕೀಲರ ಸಂಘದ ಸಭಾಂಗಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಶನಿವಾರ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಈ ಬಾರಿ ಹಿರಿಯ ನಾಗರಿಕರ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸಿದೆ ಎಂದರು.

ಹಿರಿಯ ಸಾಹಿತಿ ಎಚ್‌.ಕಾಶಿನಾಥರೆಡ್ಡಿ ವಿಶೇಷ ಉಪನ್ಯಾಸ ನೀಡಿ, ವಿಶ್ವದ 212ರಾಷ್ಟ್ರಗಳ ಪೈಕಿ ಭಾರತಕ್ಕೆ ತನ್ನದೇ ಆದ ವಿಶಿಷ್ಟವಾದ ಮಾನ್ಯತೆ ಇದೆ. ಇಲ್ಲಿ ರಚನೆಯಾದ ರಾಮಾಯಣಕ್ಕೆ 10 ಸಾವಿರ, ಮಹಾಭಾರತ ಮಹಾಕಾವ್ಯಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. ದೈನಂದಿನ ಚಟುವಟಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವುದರ
ಜೊತೆಗೆ, ಆಗಾಗ ಬರುವ ಚಿಕ್ಕ ಕಾಯಿಲೆಗಳಿಗೆ ಮನೆಮದ್ದನ್ನೇ ಬಳಸಿಕೊಂಡು ಆರೋಗ್ಯವಂತರಗಿ ಬದುಕಬೇಕು ಎಂದರು. ನಾಲ್ಕು ವೇದಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಕರ್ನಾಟಕದ ಸುಧಾಕರ ಚತುರ್ವೇದಿ 188ವರ್ಷ ಆದರೂ ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ವೃದ್ದರೆಂದು ಆತ್ಮಸ್ಥೈರ್ಯ ಕಳೆದುಕೊಳ್ಳದೇ ಎಲ್ಲವನ್ನು ಧೈರ್ಯದಿಂದ ಎದುರಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದರು.

ಸರ್ಕಾರಿ ನೌಕರರ ಸಂಘದ ನಿವೃತ್ತ ಅಧ್ಯಕ್ಷ ರಾಜಣ್ಣ ಹುಡಗೀಕರ್‌ ಮಾತನಾಡಿ, ಸರ್ಕಾರ ಹಿರಿಯ ನಾಗರಿಕರಿಗೆ ಹೆಚ್ಚು ಸೌಲಭ್ಯ ಕಲ್ಪಿಸುವ ಮೂಲಕ ನೊಂದ ಜೀವಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಪರಾವಲಂಬಿಗಳಾಗಿ ಸ್ವಾಭಿಮಾನಕ್ಕೆ ಕುತ್ತು ತಂದುಕೊಳ್ಳದೇ ಸ್ವಾವಲಂಬಿಗಳಾಗಿ ಜೀವನ ಸಾಗಿಸುವ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗಬೇಕು ಎಂದರು.

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಗಗನ್‌ ಎಂ.ಆರ್‌. ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಧರ್ಮಪಾಲ್‌ ಪೊದ್ದಾರ,
ಪ್ರಧಾನ ಕಾರ್ಯದರ್ಶಿ ಬಸವರಾಜ ಪತ್ರಿ, ನಿವೃತ್ತ ಶಿಕ್ಷಕರಾದ ಪರಮೇಶ್ವರ ಭಮಶಟ್ಟಿ, ರಾಚಯ್ಯಸ್ವಾಮಿ ಧನಾಶ್ರಿ ಮಠ, ಹಿರಿಯ ನ್ಯಾಯವಾದಿ ದಯಾನಂದರಾವ್‌ ಬಿರಾದಾರ, ವಿಠ್ಠಲರಾವ್‌ ಕಡ್ಡಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಶಂಭುಲಿಂಗ ಎಂ.ಧುಮ್ಮನಸೂರೆ ಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಈಶ್ವರ ಸೋನಕೇರಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಜೋತಗೊಂಡ ವೇದಿಕೆಯಲ್ಲಿದ್ದರು. ಭೀಮರಾವ್‌ ಓತಗಿ
ನಿರೂಪಿಸಿದರು. ಕೆ.ಶ್ರೀಮಂತ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next