Advertisement

ಸಂದೇಶ ಕಳಿಸುತ್ತೆಕುಕ್ಕರ್‌, ಎಚ್ಚರಿಕೆ ನೀಡುತ್ತೆ ಕ್ಯಾಮೆರಾ!

12:40 PM Mar 29, 2018 | |

ಹುಬ್ಬಳ್ಳಿ: ಸೋಲಾರ ಕುಕ್ಕರ್‌ನಲ್ಲಿ ಅಡುಗೆ ಸಾಮಗ್ರಿ ಹಾಕಿ ಮಾಳಿಗೆ ಮೇಲಿಟ್ಟರೆ ಸಾಕು ಅಡುಗೆಯಾದ ಕೂಡಲೇ ಮೊಬೈಲ್‌ ಗೆ ಸಂದೇಶ ಕಳುಹಿಸುತ್ತದೆ. ಧ್ವನಿ ನಿಯಂತ್ರಿತ ಐಒಟಿ ಸಾಧನ ಗೀಜರ್‌, ಲೈಟ್‌, ನಳದ ನೀರು ಆನ್‌-ಆಫ್ ಮಾಡುತ್ತದೆ.

Advertisement

ಅಪರಿಚಿತರು ಮನೆ, ಕಚೇರಿಗೆ ಪ್ರವೇಶಿಸಿದರೆ ಸರ್ವೆಲೆನ್ಸ್‌ ಕ್ಯಾಮೆರಾ ಸಂದೇಶದ ಮೂಲಕ ಎಚ್ಚರಿಸುತ್ತದೆ! ಸೌರಶಕ್ತಿಯಾಧಾರಿತ ಇಂತಹ ಮಹತ್ವದ ಸಲಕರಣೆಗಳನ್ನು ಕೈಗೆಟಕುವ ದರದಲ್ಲಿ ನೀಡಲು ಸಿಟಿಐಇ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಇದೇ ಮಾದರಿ ಉತ್ಪನ್ನಗಳಿಗಿಂತ ಹಲವು ಹೆಜ್ಜೆ ಮುಂದೆ ಎನ್ನಬಹುದಾದ ಹಲವು ತಂತ್ರಜ್ಞಾನವನ್ನು ಇವುಗಳಲ್ಲಿ ಅಳವಡಿಸಲಾಗಿದೆ.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ತಂತ್ರಜ್ಞಾನ ಅನ್ವೇಷಣೆ ಮತ್ತು ಉದ್ಯಮಶೀಲತೆ ಕೇಂದ್ರ(ಸಿಟಿಐಇ)ದ ವಿದ್ಯಾರ್ಥಿಗಳು ಸೌರಶಕ್ತಿಯ ಪರಿಣಾಮಕಾರಿ ಬಳಕೆ, ಪರಿಸರ ಸ್ನೇಹಿ ಸಲಕರಣೆ ಹಾಗೂ ಹೆಚ್ಚಿನ ಸಂಖ್ಯೆ ಜನರು ಬಳಕೆ ಮಾಡುವಂತಹ ನಿಟ್ಟಿನಲ್ಲಿ
ಹಲವು ಪ್ರಯೋಗ, ಪ್ರಯತ್ನಗಳ ಯಶಸ್ಸಿನ ಹೆಜ್ಜೆ ಹಾಕಿದ್ದಾರೆ.

ಅಡುಗೆ ಮಾಡುವ ಸೋಲಾರ್‌ ಕುಕ್ಕರ್‌ಗಳು ಮಾರುಕಟ್ಟೆಯಲ್ಲಿ ಇವೆ. ಆದರೆ ಅವುಗಳಲ್ಲಿ ಅಡುಗೆ ಸಾಮಗ್ರಿ ಹಾಕಿ ಮಾಳಿಗೆ ಮೇಲೆ ಇರಿಸಿದರೆ ಅಡುಗೆ ಆಗಿದೆಯೋ ಇಲ್ಲವೋ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಮೇಲೆ ಹೋಗಿ ನೋಡಬೇಕಾಗುತ್ತದೆ. ಆದರೆ, ಸಿಟಿಐಇ ವಿದ್ಯಾರ್ಥಿಗಳು ರೂಪಿಸಿದ ಸೋಲಾರ್‌ ಕುಕ್ಕರ್‌ನಲ್ಲಿ ಅಡುಗೆ ಸಾಮಗ್ರಿ ಹಾಕಿ ಮಾಳಿಗೆ ಮೇಲಿಟ್ಟರೆ ಸಾಕು, ಅಡುಗೆ ಆದ ಮೇಲೆ ಮೊಬೈಲ್‌ ಗೆ ಸಂದೇಶ ಕಳುಹಿಸುತ್ತದೆ. ಅದೇ ರೀತಿ ಹೈಬ್ರಿಡ್‌ ಸೋಲಾರ್‌ ಕುಕ್ಕರ್‌ನೂ ರೂಪಿಸಲಾಗಿದೆ.

ಅಪರಿಚಿತರ ಬಗ್ಗೆ ತುರ್ತು ಸಂದೇಶ: ಮನೆ, ಕಚೇರಿ, ಮಳಿಗೆಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಕಳ್ಳತನ ಅಥವಾ ಏನಾದರೂ ಘಟನೆ ನಡೆದರೆ ಈ ಕ್ಯಾಮೆರಾಗಳು ಅದನ್ನು ಚಿತ್ರೀಕರಣ ಮಾಡಿಕೊಳ್ಳುತ್ತವೆ.

Advertisement

ಸಿಟಿಐಇನ ವಿದ್ಯಾರ್ಥಿಗಳಾದ ಪ್ರವೀಣ ಪಟ್ಟಣಶೆಟ್ಟಿ ಹಾಗೂ ಸಿದ್ದಲಿಂಗೇಶ ಸೊಬಗಿನ ಎಂಬ ವಿದ್ಯಾರ್ಥಿಗಳು ಉಪನ್ಯಾಸಕ ರಾಕೇಶ ತಾಪಸ್ಕರ್‌ ಅವರ ಮಾರ್ಗದರ್ಶನದಲ್ಲಿ ರೂಪಿಸಿದ ಸೋಲಾರ್‌ಸರ್ವೆಲೆನ್ಸ್‌ ಕ್ಯಾಮೆರಾ ಮನೆ, ಕಚೇರಿ ಅಥವಾ ಮಳಿಗೆಗೆ ಯಾರು ಇಲ್ಲದಾಗ ಅಪರಿಚಿತರು ಒಳ ಪ್ರವೇಶಿದ ಕೂಡಲೇ ಪೋಟೊ ತೆಗೆದು ಅದನ್ನು ಮೇಲ್‌ಗೆ ಮಾಹಿತಿ ಹಾಗೂ ಎಚ್ಚರಿಕೆ ಸಂದೇಶ ರವಾನಿಸುತ್ತದೆ. ಇದರಿಂದ ತಕ್ಷಣವೇ ಎಚ್ಚರಿಕೆ ಕ್ರಮ ಕೈಗೊಳ್ಳಲು, ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಸುರಕ್ಷತಾ ಕಾರ್ಯ ಕೈಗೊಳ್ಳಲು ಸಹಕಾರಿ ಆಗಲಿದೆ. ಉಳಿದ ಸಿಸಿ ಕ್ಯಾಮೆರಾಗಳು ಆದ ಘಟನೆ ಸೆರೆ ಹಿಡಿದು ಸಾಕ್ಷಿ ನೀಡಿದರೆ ಸೋಲಾರ್‌ ಸರ್ವೆಲೆನ್ಸ್‌ ಕ್ಯಾಮೆರಾ ಘಟನೆ ತಡೆಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸುತ್ತದೆ. ಇತರೆ ಸಿಸಿ ಕ್ಯಾಮೆರಾಗಳು ಸೆರೆ ಹಿಡಿಯುವ ಚಿತ್ರಣ ಹಾಡ್‌
ಡಿಸ್ಕ್ನಲ್ಲಿ ಸಂಗ್ರಹಗೊಳ್ಳುತ್ತದೆ. ಸೋಲಾರ ಸರ್ವೆಲೆನ್ಸ್‌ ಕ್ಯಾಮೆರಾ ನೇರವಾಗಿ ಕೌÉಡ್‌ನೊಂದಿಗೆ ಸಂಪರ್ಕ ಹೊಂದಿದ್ದು,
ಸಂಗ್ರಹಗೊಂಡ ಚಿತ್ರಣ ತಕ್ಷಣಕ್ಕೆ ಅಲ್ಲಿಗೆ ವರ್ಗಾವಣೆಗೊಂಡು ಸಂಗ್ರಹಗೊಳ್ಳಲಿದೆ. ನಾಲ್ಕು ಕ್ಯಾಮೆರಾ ಹಾಗೂ ಸಾಧನ ಸೇರಿ
ಕೇವಲ 12 ಸಾವಿರ ರೂ.ಗೆ ಇದು ಲಭ್ಯವಾಗಲಿದೆ.

ವೈಫೈ ಹೊಂದಿದರೆ ಸಾಕು 5 ಸಾವಿರ ರೂ.ಗೆ ಸಿಗುತ್ತೆ ಐಒಟಿ ಮನೆಯಲ್ಲಿ ವೈಫೈ ಸಂಪರ್ಕ ಹೊಂದಿದ್ದರೆ ಸಾಕು ನೀವು ಎಲ್ಲಿಯೇ ಇರಿ ಮನೆಯಲ್ಲಿನ ಲೈಟ್‌, ಗೀಜರ್‌, ನಳ, ಫೀಜ್‌, ಫ್ಯಾನ್‌ಗಳನ್ನು ಆನ್‌-ಆಫ್ ಮಾಡಬಹುದು. ಇದು ಯಾವುದೇ ಆ್ಯಪ್‌ ಅಲ್ಲ. ವೈಫೈ ಮೂಲಕ ಇದು ನಡೆಯುತ್ತದೆ. ಕೇವಲ 5 ಸಾವಿರ ರೂ.ಗಳಿಗೆ ಇದು ದೊರೆಯಲಿದೆ. ಇದಲ್ಲದೆ ಕೇವಲ 2ರಿಂದ 2,500ರೂ.ಗೆ ಸೋಲಾರ್‌ ಇನ್‌ ವರ್ಟರ್‌ನ್ನು ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ. ಇದು ಸ್ಟೆಬಲೇಜರ್‌ ಗಾತ್ರದಲ್ಲಿ ಇದ್ದು, 11 ವ್ಯಾಟ್‌ನ 8 ಎಲ್‌ಇಡಿ ಬಲ್ಬ್ಗಳು ಒಂದುವರೆ ತಾಸು ಉರಿಸಬಹುದಾಗಿದೆ. ಎರಡು ಬಲ್ಬ್ಗಳಾದರೆ ನಾಲ್ಕು ತಾಸು ಉರಿಸಬಹುದಾಗಿದೆ.

ಕೈಗೆಟಕುವ ದರ
ಜನರಿಗೆ ಪ್ರಯೋಜನಕಾರಿ ಹಲವು ಸೋಲಾರ್‌ ಉತ್ಪನ್ನಗಳನ್ನು ತಯಾರಿಸಿದ್ದು, ಕೈಗೆಟಕುವ ದರದಲ್ಲಿ ನೀಡುತ್ತಿದ್ದೇವೆ. ಇದಲ್ಲದೆ ಸೋಲಾರ್‌ದಿಂದಲೇ ನಿರ್ವಹಣೆ ಆಗುವ ರೇಡಿಯೋ ತಯಾರಿಸಿದ್ದು, ಈಗಾಗಲೇ ಒಬ್ಬ ಗ್ರಾಹಕರಿಗೆ ನೀಡಿದ್ದು, ಅದು ಯಶಸ್ವಿಯಾಗಿ ಬಳಕೆಯಾಗುತ್ತಿದೆ ಎಂಬುದು ಸಿಟಿಐಇ ಉಪನ್ಯಾಸ ರಾಕೇಶ ಪಾರಸ್ಕರ್‌ ಅವರ ಅನಿಸಿಕ

„ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next