ಅಹ್ಮದಾಬಾದ್: “”ಕಾಂಗ್ರೆಸ್ ತನ್ನ ಶಾಸಕರನ್ನು ಬೆಂಗಳೂರಿನ ರೆಸಾರ್ಟ್‌ಗೆ ಕಳುಹಿಸಿತ್ತು. ನಾವೀಗ ಕಾಂಗ್ರೆಸ್ ಅನ್ನೇ 5 ವರ್ಷಗಳ ಕಾಲ ರೆಸಾರ್ಟ್‌ಗೆ ಕಳುಹಿಸಬೇಕು.”
ಹೀಗೆಂದು ಕಾಂಗ್ರೆಸ್‌ನ ಕಾಲೆಳೆದದ್ದು ಪ್ರಧಾನಿ ನರೇಂದ್ರ ಮೋದಿ. ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತಕ್ಕೆ 6 ದಿನಗಳಷ್ಟೇ ಬಾಕಿ ಯಿದ್ದು, ಸರಣಿ ರ್ಯಾಲಿಗಳನ್ನು ನಡೆಸಲಿರುವ ಪ್ರಧಾನಿ ಮೋದಿ ಅವರು ರವಿವಾರ ಭರೂಚ್, ಸುರೇಂದ್ರನಗರ ಮತ್ತು ರಾಜ್‌ಕೋಟ್‌ನಲ್ಲಿ ಬೃಹತ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು.
ಬನಸ್ಕಾಂತಾವು ಪ್ರವಾಹದಿಂದ ಮುಳುಗಿ ನರಳು ತ್ತಿದ್ದರೆ, ಕಾಂಗ್ರೆಸ್ ಶಾಸಕರು ರೆಸಾರ್ಟ್‌ನಲ್ಲಿ ಮಜಾ ಮಾಡುತ್ತಿದ್ದರು. ಅವರಿಗೆ ಗುಜರಾತ್‌ನ ಜನರ ಹಿತ ಮುಖ್ಯವಲ್ಲ. ಅವರಿಗೆ ರೆಸಾರ್ಟ್ ಮುಖ್ಯ. ಹಾಗಾಗಿ, ಆ ಪಕ್ಷವನ್ನು ಮುಂದಿನ 5 ವರ್ಷ ರೆಸಾರ್ಟ್‌ಗೆ ಕಳುಹಿಸಬೇಕು ಎಂದರು ಮೋದಿ. ಜತೆಗೆ, ಜನರನ್ನು ಧರ್ಮ, ಜಾತಿಯ ಆಧಾರದಲ್ಲಿ ವಿಭಜಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು. ಬುಲೆಟ್ ರೈಲಿನ ಬಗ್ಗೆ ಕಾಂಗ್ರೆಸ್‌ಗೆ ಅಷ್ಟೊಂದು ಅಸಮಾಧಾನವಿದ್ದರೆ, ಅವರು ಎತ್ತಿನಗಾಡಿಯಲ್ಲೇ ಸಂಚರಿಸಲಿ ಎಂದರು. ಅಲ್ಲದೆ, ನೀವು ಬಿಜೆಪಿಯನ್ನು ಬೇಕಿದ್ದರೆ ವಿರೋಧಿಸಿ. ಆದರೆ, ದೇಶದ ಅಭಿವೃದ್ಧಿಯನ್ನು ವಿರೋಧಿಸುವಷ್ಟು ಕೀಳುಮಟ್ಟಕ್ಕೆ ಇಳಿಯಬೇಡಿ ಎಂದು ಮತದಾರರಿಗೆ ಹೇಳಿದರು.
ಪಾದ್ರಿ ವಿರುದ್ಧ ಕಿಡಿ: ಇದೇ ವೇಳೆ, ರಾಷ್ಟ್ರೀಯವಾದಿ ಪಕ್ಷಕ್ಕೆ ಮತ ಹಾಕಬೇಡಿ ಎಂಬ ಗುಜರಾತ್‌ನ ಪಾದ್ರಿಯೊಬ್ಬರ ಆದೇಶ ಕುರಿತೂ ಪ್ರಸ್ತಾವಿಸಿದ ಮೋದಿ, “ರಾಷ್ಟ್ರೀಯವಾದಿ ಶಕ್ತಿಗಳನ್ನು ಅಧಿಕಾರದಿಂದ ಕೆಳಗಿಳಿಸಿ ಎಂದು ಆಧ್ಯಾತ್ಮಿಕ ನಾಯಕರೊಬ್ಬರು ಆದೇಶ ಹೊರಡಿಸುತ್ತಾರೆ. ಆ ರಾಷ್ಟ್ರ ಭಕ್ತಿಯೇ ಎಲ್ಲ ಅಡೆತಡೆಗಳನ್ನೂ ಮೀರಿ ಪ್ರತಿ ಭಾರತೀಯ ನಿಗೂ ನೆರವಾಗುವಂತೆ ನಮಗೆ ಮಾರ್ಗದರ್ಶನ ನೀಡುವಂಥದ್ದು. ಈ ರೀತಿಯ ಫತ್ವಾ ಹೊರಡಿ ಸುವಂಥ ವ್ಯಕ್ತಿಗಳು, ಮೊದಲು ಫಾದರ್ ಟಾಮ್ ಅನ್ನು ಅಫ್ಘಾನಿಸ್ಥಾನದಿಂದ ಭಾರತಕ್ಕೆ ವಾಪಸ್ ಕರೆತರಲು ನಾವು ಮಾಡಿದ ಪರಿಶ್ರಮವನ್ನೊಮ್ಮೆ ನೋಡಬೇಕಿತ್ತು’ ಎಂದರು.
ಕೈ ಅಧ್ಯಕ್ಷ ಚುನಾವಣೆ ಬಗ್ಗೆ ಲೇವಡಿ: ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಬಗ್ಗೆಯೂ ವ್ಯಂಗ್ಯ ವಾಡಿದ ಪ್ರಧಾನಿ ಮೋದಿ, ಚುನಾವಣೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕ ಶೆಹಜಾದ್ ಪೂನಾವಾಲಾ ಹೆಸರು ಪ್ರಸ್ತಾವಿಸಲು ಮರೆಯಲಿಲ್ಲ. “ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ಯುವ ನಾಯಕ ಶೆಹಜಾದ್ ಧ್ವನಿಯೆತ್ತಿದ್ದಾರೆ. ಅವರ ಧ್ವನಿ ಹತ್ತಿಕ್ಕಲು ಕಾಂಗ್ರೆಸ್ ಯತ್ನಿಸುತ್ತಿದೆ. ಸಾಮಾಜಿಕ ಜಾಲತಾಣಗಳ ಗ್ರೂಪ್ ನಿಂದಲೂ ಅವರನ್ನು ಹೊರಹಾಕ ಲಾಗುತ್ತಿದೆ. ಇದೇನಾ ಸಹಿಷ್ಣುತೆ’ ಎಂದು ಪ್ರಶ್ನಿಸಿದ್ದಾರೆ ಮೋದಿ. ಜತೆಗೆ, ಯಾರಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲವೋ ಅಂಥವರು ಜನರಿಗಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ, ಶೆಹಜಾದ್ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಶ್ಲಾ ಸಿದ್ದಾರೆ.
9 ಲಕ್ಷ ಲೀ. ಮದ್ಯ, 8 ಕೋಟಿಯ ಚಿನ್ನ ವಶ
ಗುಜರಾತ್‌ನಲ್ಲಿ ಈವರೆಗೆ ಸುಮಾರು 9.61 ಲಕ್ಷ ಲೀಟರ್ ಮದ್ಯ, 1.71 ಕೋಟಿ ರೂ. ನಗದು, 8 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಆಭರಣಗಳನ್ನು ಚುನಾವಣಾ ಆಯೋಗ ನೇಮಿಸಿದ ವೆಚ್ಚ ಮೇಲ್ವಿಚಾರಣಾ ತಂಡವು ವಶಪಡಿಸಿಕೊಂಡಿದೆ.