ಮಣಿಪಾಲ: ಪ್ರವರ್ಧಮಾನಕ್ಕೆ ಬರುತ್ತಿರುವ ಸೆಮಿಕಂಡೆಕ್ಟರ್, ಡಿಸ್‌ಪ್ಲೇ ಡಿಸೈನ್ ಹಾಗೂ ಇನ್ನೋವೇಶನ್ ವಿಷಯವಾಗಿ ಅಭಿವೃದ್ಧಿ ಹಾಗೂ ಸಂಶೋಧನೆ ಸಂಬಂಧ ಮಣಿಪಾಲದ ಮಾಹೆ ವಿ.ವಿ.ಯ ಎಂಐಟಿ ಹಾಗೂ ಕೇಂದ್ರ ಸರಕಾರದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನಾ#ರ್ಮೆಶನ್ ಟೆಕ್ನಾಲಜಿ ಸಚಿವಾಲಯದ ಸೆಮಿಕಂಡಕ್ಟರ್ ಲ್ಯಾಬೋರೆಟರಿ (ಎಸ್‌ಸಿಎಲ್) ಹೊಸ ಒಡಂಬಡಿಕೆಗೆ ಸಹಿ ಹಾಕಿವೆ.
ಎಂಐಟಿ ನಿರ್ದೇಶಕ ಕ| ಡಾ| ಅನಿಲ್ ರಾಣ ಹಾಗೂ ಎಸ್‌ಸಿಎಲ್ ನಿರ್ದೇಶಕ ವಿಕಾಸ್ ತ್ರಿಖ ಅವರು ಮೇ 17ರಂದು ಮೊಹಲಿಯ ಎಸ್‌ಸಿಎಲ್ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಡಂಬಡಿಕೆಗೆ ಸಹಿ ಮಾಡಿದರು.
ಕ| ಡಾ| ಅನಿಲ ರಾಣ ಮಾತನಾಡಿ, ಮಾಹೆಯ ಶೈಕ್ಷಣಿಕ ಪಠ್ಯಕ್ರಮವು ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ಈ ಒಡಂಬಡಿಕೆಯು ವಿದ್ಯಾರ್ಥಿಗಳ ಸಂಶೋಧನೆ ಮತ್ತು ಕೌಶಲಾಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ. ಎಸ್‌ಸಿಎಲ್ ತಾಂತ್ರಿಕ ಸಹಕಾರ ನೀಡಿದರೆ, ಮಾಹೆಯು ಶೈಕ್ಷಣಿಕ ಸಹಕಾರ ಒದಗಿಸಲಿದೆ. ತಂತ್ರಜ್ಞಾನ, ಸಂಶೋಧನೆ ಮತ್ತು ಶೈಕ್ಷಣಿಕ ವಿಷಯದಲ್ಲಿ ಮಾಹೆ ಹಾಗೂ ಎಲ್‌ಸಿಎಲ್‌ಗೆ ಸಹಕಾರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಎಂಐಟಿ ಸಹ ಪ್ರಾಧ್ಯಪಕರಾದ ಡಾ| ಶೌನಕ್ ಡೀ, ಡಾ| ತನ್ವೀರ್, ಕೇಂದ್ರ ಸರಕಾರದ ಸೆಮಿಕಂಡಕ್ಟರ್ ವಿಭಾಗದ ತಂತ್ರಜ್ಞಾನ ಅಭಿವೃದ್ಧಿ ಮುಖ್ಯಸ್ಥ ಡಾ| ಮನಿಶ್ ಹೂಡ ಉಪಸ್ಥಿತರಿದ್ದರು.