ಚೆನ್ನೈ: ಭವಿಷ್ಯದ ಉಡಾವಣಾ ವಾಹಕಗಳಿಗೆ ಶಕ್ತಿ ತುಂಬುವ ಸೆಮಿ ಕ್ರಯೋಜೆನಿಕ್ ಎಂಜಿನ್‌ಗಳ ಪರೀಕ್ಷೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಯಶಸ್ವಿಯಾಗಿ ಪ್ರಾರಂಭಿಸಿದೆ.
ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಸೆಮಿ ಕ್ರಯೋಜೆನಿಕ್ ಇಂಟಿಗ್ರೇಟೆಡ್ ಎಂಜಿನ್ ಮತ್ತು ಸ್ಟೇಜ್ ಟೆಸ್ಟ್ ಘಟಕದಲ್ಲಿ ಬುಧವಾರ 2000 ಕೆಎನ್ (ಕಿಲೋನ್ಯೂಟನ್) ಸೆಮಿ ಕ್ರಯೋಜೆನಿಕ್ ಎಂಜಿನ್‌ನ ಮಧ್ಯಂತರ ಸಂರಚನೆಯ ಮೇಲೆ ಮೊಟ್ಟಮೊದಲ ಸಂಯೋಜಿತ ಪರೀಕ್ಷೆಯನ್ನು ಇಸ್ರೋ ನಡೆಸಿದೆ.
ಭವಿಷ್ಯದ ಉಡಾವಣಾ ವಾಹಕಗಳಿಗಾಗಿ ಲಿಕ್ವಿಡ್ ಆಕ್ಸಿಜನ್(ಎಲ್‌ಎಕ್ಸ್)-ಕೆರೊಸಿನ್ ಪೊ›ಪೆಲ್ಲಂಟ್ ಸಂಯೋಜನೆಯಲ್ಲಿ ಕಾರ್ಯ ನಿರ್ವಹಿಸುವ 2000 ಕೆಎನ್ ಥ್ರಸ್ಟ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುವತ್ತ ಈ ಪರೀಕ್ಷೆಯು ಮುಂದಿನ ಹೆಜ್ಜೆಯಾಗಿದೆ. ಪವರ್ ಹೆಡ್ ಟೆಸ್ಟ್ ಆರ್ಟಿಕಲ್(ಪಿಎಚ್‌ಟಿಎ) ಎಂದು ಕರೆಯುವ ಮಧ್ಯಂತರ ಸಂರಚನೆಯ ಥ್ರಸ್ಟ್ ಚೇಂಬರ್ ಅನ್ನು ಹೊರತುಪಡಿಸಿ, ಎಲ್ಲಾ ಎಂಜಿನ್ ಸಿಸ್ಟಮ್‌ಗಳನ್ನು ಇದು ಒಳಗೊಂಡಿದೆ. ಭಾರತೀಯ ಉದ್ಯಮದ ಸಹಭಾಗಿತ್ವದೊಂದಿಗೆ ದಿ ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್(ಎಲ್‌ಪಿಎಸ್‌ಸಿ) 2000 ಕೆಎನ್ ಥ್ರಸ್ಟ್ ನೊಂದಿಗೆ ಸೆಮಿ ಕ್ರಯೋಜೆನಿಕ್ ಎಂಜಿನ್‌ನ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಕೈಗೊಂಡಿದೆ. ಇದು ಭವಿಷ್ಯದ ಉಡಾವಣಾ ವಾಹಕಗಳಿಗೆ ಶಕ್ತಿ ತುಂಬುತ್ತದೆ.