Advertisement

Arrest: ಆಹಾರಕ್ಕೆ ಉಗುಳಿ ಮಾರಾಟ- ವ್ಯಕ್ತಿಬಂಧನ

09:08 PM May 27, 2023 | Team Udayavani |

ಲಕ್ನೋ: ಉತ್ತರಪ್ರದೇಶದ ಘಾಜಿಯಾಬಾದ್‌ನ ರೆಸ್ಟೋರೆಂಟ್‌ ಒಂದರ ಸಿಬ್ಬಂದಿ, ಗ್ರಾಹಕರಿಗೆ ನೀಡುತ್ತಿದ್ದ ಆಹಾರದಲ್ಲಿ ಉಗುಳಿ ಪ್ಯಾಕ್‌ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಈ ಸಂಬಂಧಿಸಿದಂತೆ ಕೇಸು ದಾಖಲಿಸಲಾಗಿದೆ. ಲೋನಿ ಏರಿಯಾದಲ್ಲಿರುವ ಹೋಟೆಲ್‌ ಸಿಬ್ಬಂದಿಗಳಿಬ್ಬರು ಆಹಾರವನ್ನು ಪ್ಯಾಕ್‌ ಮಾಡುತ್ತಿರುತ್ತಾರೆ. ಈ ವೇಳೆ ಒಬ್ಬ ಸಿಬ್ಬಂದಿ ಅವುಗಳ ಒಳಗೆ ಉಗುಳಿ ನಂತರ ಪ್ಯಾಕ್‌ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಹೋಟೆಲ್‌ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಯುವವಾಹಿನಿ ಎನ್ನುವ ಸಂಘಟನೆಯೊಂದು ದೂರು ದಾಖಲಿಸಿದೆ. ಅಲ್ಲದೇ ಈ ಹೋಟೆಲ್‌ ನಿರ್ದಿಷ್ಟ ಸಮುದಾಯವೊಂದಕ್ಕೆ ಆಹಾರ ಪೂರೈಸುತ್ತದೆ. ಬೇರೆ ಸಮುದಾಯಕ್ಕೆ ಕಳಿಸುವ ಆಹಾರಕ್ಕೂ ಉಗುಳಿ ಅಸಹ್ಯ ಹುಟ್ಟುವಂತೆ ಮಾಡಿದ್ದಾರೆ. ಈ ಸಂಬಂಧಿಸಿದಂತೆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next