ಪುಣೆ: ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಜೀವಕ್ಕೆ ಎರವಾದ ಹಲವು ಘಟನೆಗಳು ಆಗಾಗ ವರದಿಯಾಗುತ್ತಿವೆ. ಅದಕ್ಕೆ ಸೇರ್ಪಡೆ ಎಂಬಂಥ ಘಟನೆ ಪುಣೆಯಲ್ಲಿ ನಡೆದಿದೆ.
ವರಾಂಧಾ ಘಾಟ್‌ನಲ್ಲಿ ಜ. 3ರಂದು ಚಾರಣಕ್ಕೆ ತೆರಳಿದ್ದ 25 ಮಂದಿಯ ಪೈಕಿ ಅಬ್ದುಲ್ ಶೇಖ್ ಎಂಬುವರು ಕೋತಿಯ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ 500 ಅಡಿ ಪ್ರಪಾತಕ್ಕೆ ಬಿದ್ದು ಅಸುನೀಗಿದ್ದಾರೆ. ಕಾರಿನಲ್ಲಿ ಸ್ನೇಹಿತರ ಜತೆಗೆ ಕೊಂಕಣ್ ಪ್ರದೇಶಕ್ಕೆ ತೆರಳುತ್ತಿರುವಾಗ ವಾಘೆj„ ದೇಗುಲ ಸಮೀಪ ಕಾರು ನಿಲ್ಲಿಸಲಾಯಿತು. ಘಾಟ್ ರಸ್ತೆಯ ಸಮೀಪದಲ್ಲೇ ಕೋತಿಗಳೂ ಇದ್ದವು. ಅವುಗಳ ಜತೆಗೆ ಸೆಲ್ಫೆ ತೆಗೆಯಲು ಪ್ರಯತ್ನಿಸುತ್ತಿದ್ದ ವೇಳೆ ಆಯ ತಪ್ಪಿ ಅಬ್ದುಲ್ ಶೇಖ್ ಅವರು 500 ಅಡಿ ಪ್ರಪಾತಕ್ಕೆ ಬಿದಿದ್ದರು. ಜ.4ರಂದು ಅವರ ಮೃತದೇಹ ಪತ್ತೆಯಾಗಿದೆ.