Advertisement

ಗೋವಿನ ಜತೆ ಸೆಲ್ಫಿ ಕಳುಹಿಸಿ

09:51 AM Nov 13, 2018 | Harsha Rao |

ಕೋಲ್ಕತಾ: ಗೋ ಸಾಕಣೆಯೇ ಎಂದು ಮೂಗು ಮುರಿಯುವವರಿಗೆ ಮಾಹಿತಿಯೊಂದಿದೆ. ವಿಶೇಷವಾಗಿ ಯುವ ಜನರಲ್ಲಿ ಗೋವುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೋಲ್ಕತಾ ಮೂಲದ ಗೋ ಸೇವಾ ಪರಿವಾರ ಎಂಬ ಎನ್‌ಜಿಒ “ಸೆಲ್ಫಿ ವಿತ್‌ ಕೌ’ ಎಂಬ ಸ್ಪರ್ಧೆ ಆಯೋಜಿಸಿದೆ. ಅಂದ ಹಾಗೆ ಈ ಸ್ಪರ್ಧೆ ಪಶ್ಚಿಮ ಬಂಗಾಳ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. “ವೈಜ್ಞಾನಿಕವಾಗಿ ಗೋವುಗಳ ರಕ್ಷಣೆ’ ಎನ್ನುವುದು ಅದರ ಧ್ಯೇಯ ವಾಕ್ಯ. 

Advertisement

ಸ್ಪರ್ಧೆಯಲ್ಲಿ ಭಾಗವಹಿಸುವವರು ಗೋವಿನ ಜತೆಗೆ ತಾವು ತೆಗೆಸಿಕೊಂಡ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ ಹಾಗೂ ವಾಟ್ಸ್‌ಆ್ಯಪ್‌ಗ್ಳಲ್ಲಿ ‘#selfiewithgomata‘ ಎಂಬ ಟ್ಯಾಗ್‌ನ ಅಡಿಯಲ್ಲಿ ಪ್ರಕಟಿಸಬೇಕು. ಉತ್ತಮ ಸೆಲ್ಫಿಗಳಿಗೆ ನ. 20ರಂದು ನಡೆ ಯುವ ಸಮಾರಂಭದಲ್ಲಿ ಗೋ ಮೂತ್ರ ಹಾಗೂ ಸಗಣಿಯಿಂದ ತಯಾರಿಸಿದ ಪಾತ್ರೆ ತೊಳೆಯುವ ಸಾಬೂನು, ಕೀಟನಾಶಕಗಳು, ಸೋಪುಗಳುಳ್ಳ ಉಡುಗೊರೆಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಜತೆಗೆ, ಒಂದು ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ. 

ಪಶ್ಚಿಮ ಬಂಗಾಳದ ನಾಲ್ಕು ಜಿಲ್ಲೆಗಳಾದ ಪಶ್ಚಿಮ ಮಿಡ್ನಾಪುರ, ಬಂಕುರ, ಪುರುಲಿಯಾ, ಬುರುದ್ವಾನ್‌ಗಳಲ್ಲಿ 70ಕ್ಕೂ ಅಧಿಕ ಬಯೋ ಗ್ಯಾಸ್‌ ಸ್ಥಾವರಗಳನ್ನು ಸ್ಥಾಪಿಸಿದ್ದಾಗಿ ಸಂಘಟನೆ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next