Advertisement

ಮೇ 13ಕ್ಕೆ “ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ”ರಿಲೀಸ್

03:21 PM May 09, 2022 | Team Udayavani |

“ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಹೀಗೊಂದು ವಿಭಿನ್ನ ಟೈಟಲ್‌ನ ಚಿತ್ರ ಮೇ 13 ರಂದು ತೆರೆಕಾಣುತ್ತಿದೆ.

Advertisement

ಈ ಚಿತ್ರವನ್ನು ಮಧುಚಂದ್ರ ನಿರ್ದೇಶಿಸಿದ್ದಾರೆ. ಸೃಜನ್‌ ಲೋಕೇಶ್‌ ಹಾಗೂ ಮೇಘನಾ ರಾಜ್‌ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಮಕ್ಕಳು ಅತಿಯಾಗಿ ಮೊಬೈಲ್‌ ಬಳಸುವುದರಿಂದ ಆಗುವ ಆಡ್ಡಪರಿಣಾಮದ ಬಗ್ಗೆ ಹೇಳಲಾಗಿದೆ.

“ಚಿತ್ರದ ಕಥೆ ಪ್ರಸ್ತುತವಾಗಿ ಸಮಾಜದಲ್ಲಿ ನಡೆಯುತ್ತಿರುವ ಒಂದು ಸಾಮಾನ್ಯ ವಿಷಯವಾಗಿದೆ. ಆದರೂ ಗಂಭಿರ ಸಂಗತಿಯೂ ಹೌದು. ವಿಷಯ ವಸ್ತುವನ್ನು ಒಂದು ಮನೋರಂಜನಾನ್ಮತಕ ದೃಷ್ಟಿಯಲ್ಲಿ ಕಾಮಿಡಿ ಹಾಗೂ ಡ್ರಾಮಾ ಶೈಲಿಯಲ್ಲಿ ತೋರ್ಪಡಿಸುವ ಪ್ರಯತ್ನ ನಮ್ಮದಾಗಿದೆ’ ಎಂಬುದು ಮಧುಚಂದ್ರ ಅವರ ಮಾತು.

“ಆಕಾಶ ಬುಟ್ಟಿ ‘ ಸಂಸ್ಥೆ ಅಡಿಯಲ್ಲಿ 80 ಜನ ಪಾಲಕರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಮಧುಚಂದ್ರ ಚಿತ್ರಕಥೆ, ನಿರ್ದೇಶನ, ಶಮಂತ್‌ ನಾಗ್‌ ಸಂಗೀತ ನಿರ್ದೇಶನ, ಬಾಹುಬಲಿ ಖ್ಯಾತಿ ಅಸೋಸಿಯೇಟ್‌ ಛಾಯಾಗ್ರಾಹಕರಾಗಿದ್ದ ರವೀಂದ್ರನಾಥ್‌ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next