Advertisement

ಸ್ವಯಂ ನಿಯಂತ್ರಣವೇ ಮದ್ದು: ಆನ್‌ಲೈನ್‌ ಗೇಮಿಂಗ್‌ಗಳಿಗೆ ಕೇಂದ್ರದ ಹೊಸ ನಿಯಮ

01:55 AM Jan 03, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್‌ಗೇ ಮಿಂಗ್‌ ಕ್ಷೇತ್ರದ ನಿಯಂತ್ರಣಕ್ಕೆ ಸ್ವಯಂ ನಿಯಂತ್ರಣ, ಜತೆಗೆ ಆಟಗಾರರ ವಯೋಮಿತಿ ಮತ್ತು ಇತರ ಅಂಶಗಳ ಕಡ್ಡಾಯ ಪರಿಶೀಲನೆ, ಗೇಮಿಂಗ್‌ ಸೇವೆಗಳನ್ನು ಒದಗಿಸುವ ಕಂಪೆನಿಗಳಿಗೆ ಭಾರತದ ವಿಳಾಸ ಕಡ್ಡಾಯ…

Advertisement

ಇದು ಕೇಂದ್ರ ಸರಕಾರ ಸೋಮವಾರ ಸಾರ್ವಜನಿಕರ ಪರಿಶೀಲನೆಗಾಗಿ ಬಿಡುಗಡೆ ಮಾಡಿದ ಕರಡು ನಿಯಮಗಳ ಪ್ರಧಾನ ಅಂಶ. ಕರಡು ನಿಯಮಗಳಲ್ಲಿ ಸ್ವಯಂ ನಿಯಂತ್ರಣಕ್ಕೇ ಆದ್ಯತೆ ನೀಡಲಾಗಿದೆ. ಅದಕ್ಕಾಗಿ ಆನ್‌ಲೈನ್‌ ಗೇಮಿಂಗ್‌, ಮಾಹಿತಿ ತಂತ್ರಜ್ಞಾನ, ಮನಶಾಸ್ತ್ರಜ್ಞರು, ವೈದ್ಯಕೀಯ, ಸಾರ್ವಜನಿಕ ನೀತಿನಿರೂಪಣೆ ಅಥವಾ ಇನ್ನಿತರ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಐವರು ಸದಸ್ಯರ ಸಮಿತಿಯನ್ನು ರಚಿಸುವ ಬಗ್ಗೆ ಕರಡು ನೀತಿಯಲ್ಲಿ ಪ್ರಸ್ತಾವ ಮಾಡಲಾಗಿದೆ.

ದೇಶದ ರಕ್ಷಣೆ, ಸಾರ್ವಭೌಮತ್ವ, ಇತರ ರಾಷ್ಟ್ರಗಳ ಜತೆಗೆ ಸೌಹಾರ್ದ ಸಂಬಂಧ ಹೊಂದಿರುವ ವಿಚಾರಕ್ಕೆ ಧಕ್ಕೆ ಯಾಗುವ ಅಂಶಗಳು ಇಲ್ಲದೆ ಇರುವು ದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಆನ್‌ಲೈನ್‌ ಗೇಮಿಂಗ್‌ ಕಂಪೆನಿಗಳು ತಮ್ಮ ಗೇಮ್‌ಗಳಲ್ಲಿ ನೋಂದಣಿ ವಿವರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಜತೆಗೆ 18 ವರ್ಷಕ್ಕಿಂತ ಕೆಳಗಿನ ವರಿಗೆ ಹೆತ್ತವರ ಅನುಮತಿ ಕಡ್ಡಾಯ.

ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ 2021ರಲ್ಲಿ ಕೇಂದ್ರ ಸರಕಾರ ಹೊರಡಿಸಿದ್ದ ನಿಯಮದ ವ್ಯಾಪ್ತಿಯಲ್ಲಿಯೇ ಪ್ರಸ್ತಾವಿತ ನಿಯಮಗಳು ಇರಲಿವೆ.

ಇದರ ಜತೆಗೆ ಅವುಗಳು ದೇಶದಲ್ಲಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಅದಕ್ಕಾಗಿ ಕಂಪೆನಿಗಳು ದೇಶದಲ್ಲಿ ಕಡ್ಡಾಯವಾಗಿ ವಿಳಾಸ ಹೊಂದಿರ ಬೇಕಾಗುತ್ತದೆ. ಕಂಪೆನಿಗಳ ವಿರುದ್ಧ ಸಲ್ಲಿಕೆಯಾಗುವ ದೂರುಗಳ ವಿಲೇವಾರಿಗಾಗಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಆತ ಭಾರತದ ಪ್ರಜೆಯೇ ಆಗಿರಬೇಕಾಗಿದೆ.

Advertisement

ಕರ್ನಾಟಕದಲ್ಲಿ ಏನಾಗಿದೆ?
ಕರ್ನಾಟಕದಲ್ಲಿ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ ಕೆಲವು ಕಂಪೆನಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾಗ ಸರಕಾರದ ಆದೇಶ ವಜಾಗೊಂಡಿತ್ತು. ರಾಜ್ಯ ಸರಕಾರ ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದೆ. ಇನ್ನೂ ಕೆಲವು ರಾಜ್ಯಗಳು ಆನ್‌ಲೈನ್‌ ಗೇಮಿಂಗ್‌ ಅನ್ನು ರದ್ದು ಮಾಡಿವೆಯಾದರೂ ಇದು ಸ್ಕಿಲ್‌ನೊಳಗೆ ಬರುವುದರಿಂದ ಕೋರ್ಟ್‌ಗಳು ನಿಷೇಧವನ್ನು ತೆಗೆದುಹಾಕಿವೆ. ಹೀಗಾಗಿ ಕೇಂದ್ರ ಸರಕಾರವೇ ನಿಯಮಾವಳಿ ರೂಪಿಸಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next