Advertisement

ಅನ್‌ಲಾಕ್‌ ಆದರೂ ಜನರಲ್ಲಿ ಸ್ವಯಂ ಲಾಕ್‌ಡೌನ್‌ ಇರಲಿ

03:22 AM Jul 19, 2021 | Team Udayavani |

ರಾಜ್ಯ ಮತ್ತೂಂದು ಸುತ್ತಿನ ಲಾಕ್‌ಡೌನ್‌ ನಿರ್ಬಂಧದಿಂದ ಬಿಡುಗಡೆ ಹೊಂದುತ್ತಿದೆ. ಸರಕಾರ ಅನ್‌ಲಾಕ್‌ 4.0 ಘೋಷಿಸಿದೆ. ಇದರೊಂದಿಗೆ ರಾಜ್ಯ ಬಹುತೇಕ ಬಂಧಮುಕ್ತವಾದಂತಾಗಿದೆ. ಆರ್ಥಿಕ ಎಂಜಿನ್‌ ಚಾಲನೆಗೆ ಈ ಅನ್‌ಲಾಕ್‌ ಅನಿವಾರ್ಯವಾಗಿತ್ತು. ಸತತ ಎರಡನೇ ವರ್ಷ ಸುದೀರ್ಘ‌ ಲಾಕ್‌ಡೌನ್‌ ಅನ್ನು ಜನತೆ, ಸರಕಾರ ಎದುರಿಸಿದೆ. ಹಾಗೊಂದು ವೇಳೆ ಕೋವಿಡ್‌ ಭಯದಲ್ಲಿ ಲಾಕ್‌ಡೌನ್‌ ಮುಂದು ವರೆಸಿದ್ದರೆ ಆರ್ಥಿಕ ವ್ಯವಸ್ಥೆ ಮೇಲೆ ಮತ್ತಷ್ಟು ದುಷ್ಪರಿಣಾಮಗಳು ಬೀರುವ ಸಾಧ್ಯತೆ ಇತ್ತು.

Advertisement

ಹಾಗಂತ ಸಾರ್ವಜನಿಕರು ಮೈಮರೆಯುವಂತೆಯೂ ಇಲ್ಲ. ಏಕೆಂದರೆ ವಿಶ್ವ ಆರೋಗ್ಯ ಸಂಸ್ಥೆ ಮೂರನೇ ಅಲೆಯ ಆರಂಭಿಕ ಹಂತ ದಲ್ಲಿದ್ದೇವೆ ಎಂಬ ಮುನ್ಸೂಚನೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ “ಕೊರೊನಾ ವೈರಸ್‌ ಸೋಂಕನ್ನು ನಿರ್ಲಕ್ಷಿಸಬೇಡಿ’ ಎಂದು ರಾಜ್ಯಗಳಿಗೆ ಎಚ್ಚರಿಕೆ ನೀಡಿ¨ªಾರೆ. ನೆರೆಯ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಳೆದ ತಿಂಗಳು ತಗ್ಗಿದ್ದ ಕೊರೊನಾ ಎರಡನೇ ಅಲೆ ಮತ್ತೆ ಹೆಚ್ಚಳವಾಗಿದ್ದು, ಹತ್ತು ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಆರ್ಥಿಕತೆ ದೃಷ್ಟಿಯಿಂದ ಅನ್‌ಲಾಕ್‌ ಅನಿವಾರ್ಯವಾಗಿದ್ದು ಸರಕಾರವು “ರಾಜ್ಯದಲ್ಲಿ ಮತ್ತೆ ಸೋಂಕು ಪ್ರಕರಣಗಳು ಹೆಚ್ಚಳವಾದರೇ ಜನರ ನಿರ್ಲಕ್ಷ್ಯವೇ ಅದಕ್ಕೆ ಕಾರಣ’ ಎಂದು ಹೇಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕಿಂತ ಸಾರ್ವಜನಿಕರ ಜವಾಬ್ದಾರಿ ಈಗ ಹೆಚ್ಚಿದೆ. ಈಗಾಗಲೇ ಜನರಿಗೆ ಕಳೆದ ಒಂದೂವರೆ ವರ್ಷದಿಂದ ಕೊರೊನಾ ಮೊದಲ ಮತ್ತು ಎರಡನೇ ಅಲೆ ಎದುರಿಸಿದ ಅನುಭವವಿದೆ. ರಾಜ್ಯದಲ್ಲಿ ಇದುವರೆಗೆ 28.8 ಲಕ್ಷ ಕೊರೊನಾ ಸೋಂಕು ಪ್ರಕರಣ ಗಳು ವರದಿಯಾಗಿದ್ದು, 36,121 ಮಂದಿಯನ್ನು ವೈರಸ್‌ ಬಲಿ ಪಡೆದಿದೆ. ಹೀಗಾಗಿ ಜನರು ಸ್ವಯಂ ಲಾಕ್‌ಡೌನ್‌ ಮೂಲಕ ತಮ್ಮ ಆರೋ ಗ್ಯಕ್ಕೆ ಆದ್ಯತೆ ನೀಡಲೇ ಬೇಕಿದೆ. ಅಲ್ಲದೆ, ಸಾಂಕ್ರಾಮಿಕ ಸಂಪೂರ್ಣ ತಗ್ಗುವವರೆಗೂ ಸಾರ್ವಜನಿಕರು ಸ್ವಯಂ ನಿರ್ಬಂಧ ಹಾಕಿಕೊಂಡು, ಕಟ್ಟು ನಿಟ್ಟಾಗಿ ಮುಂಜಾಗ್ರತಾ ಕ್ರಮ ಪಾಲಿಸಿದರೆ ಯಾವ ಅಲೆಗಳೂ ಹಾನಿಮಾಡಲಾರವು ಎಂಬ ತಜ್ಞರ ಮಾತನ್ನು ಮರೆಯಬಾರದು.

ಬಹುತೇಕ ಅನ್‌ಲಾಕ್‌ ಮಾಡಿದ ಸರಕಾರ ಲಸಿಕೆ ಅಭಿಯಾನಕ್ಕೆ ವೇಗ ನೀಡಬೇಕಿದೆ. ಪದವಿ ತರಗತಿಗಳ ಹಾಜರಾತಿಗೆ ಲಸಿಕೆ ಕಡ್ಡಾಯ ಗೊಳಿಸಿದ್ದು, ಅದಕ್ಕೆ ತಕ್ಕಂತೆ ಕಾಲೇಜುಗಳಲ್ಲಿ ಲಸಿಕೆ ಶಿಬಿರಗಳನ್ನು ಹೆಚ್ಚಿಸಬೇಕು. ಜನಸಾಮಾನ್ಯರು ಕೂಡ ಆದ್ಯತಾ ವಲಯಕ್ಕೆ ಅವಕಾಶ ನೀಡಿ ತಾವೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕೆ ಪಡೆದ ಅಅನಂತರವೂ ಕೊರೊನಾ ಮುಂಜಾಗ್ರತ ಕ್ರಮ ಕಡ್ಡಾಯ ಪಾಲಿಸಬೇಕು. 200ಕ್ಕೂ ಹೆಚ್ಚು ಕನ್ನಡ ಸಿನೆಮಾಗಳು ಬಿಡುಗಡೆಗೆ ಕಾಯುತ್ತಿದ್ದು, ಈ ಪೈಕಿ ಮುಕ್ಕಾಲು ಭಾಗ ಹೊಸಬರ ಸಿನೆಮಾಗಳಾಗಿದ್ದವು. ಚಿತ್ರರಂಗದ ವಹಿವಾಟು, ಕಲಾವಿದರು, ಕಾರ್ಮಿಕರ ಜೀವನಕ್ಕೆ ಧಕ್ಕೆ ಬಾರದಂತೆ ಮಾಡಲು ಚಿತ್ರಮಂದಿರ ತೆರೆಯುವ ಅನಿವಾರ್ಯತೆ ಇತ್ತು. ಸದ್ಯ ಶೇ.50ರಷ್ಟು ಆಸನ ಭರ್ತಿಯೊಂದಿಗೆ ಅನುಮತಿ ನೀಡಿರುವುದು ಉದ್ಯಮ ಚೇತರಿಕೆಗೆ ಕಾರಣವಾಗಲಿದೆ. ಇನ್ನು ರಾಜ್ಯದಲ್ಲಿ ಮೊದಲ ಹಂತದ ಅನ್‌ಲಾಕ್‌ ಜಾರಿ ಮಾಡಿ ಒಂದು ತಿಂಗಳಾಗಿದ್ದು, ನಾಲ್ಕನೇ ಹಂತದ ಅನ್‌ಲಾಕ್‌ ಜಾರಿಯಾಗುತ್ತಿದೆ ಸದ್ಯ ಕೊರೊನಾ ಸೋಂಕು ಮಾತ್ರ ನಿಯಂತ್ರಣದಲ್ಲಿರುವುದು ಸಮಾಧಾನಕರ ಸಂಗತಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next