Advertisement

ಕೋವಿಡ್ ವಿರುದ್ದ ಸ್ವಯಂ ಲಾಕ್ ಡೌನ್ ಗೆ ಮುಂದಾದ ವಿಟ್ಲ ನಾಗರಿಕರು

05:01 PM May 25, 2020 | keerthan |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಠಾಣೆಯ ಪೊಲೀಸ್ ಸಿಬ್ಬಂದಿಯೋರ್ವರಿಗೆ ರವಿವಾರ ಕೋವಿಡ್-19 ಸೋಂಕು ದೃಢವಾದ ಹಿನ್ನಲೆಯಲ್ಲಿ ಎಚ್ಚರಿಕೆಯ ಕ್ರಮವಾಗಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಧ್ಯಾಹ್ನ ಬಳಿಕ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ.

Advertisement

ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆ ತನಕ ಮಾತ್ರ ವಿಟ್ಲ ಪೇಟೆಯನ್ನು ತೆರೆಯಲು ನಿರ್ಧರಿಸಲಾಗಿದೆ. ಮಂಗಳವಾರದಿಂದ ಇದು ಜಾರಿಯಾಗಲಿದ್ದು ಮಧ್ಯಾಹ್ನ 2 ಗಂಟೆ ಬಳಿಕ ಸಂಪೂರ್ಣ ಲಾಕ್ ಡೌನ್ ಗೆ‌ ನಿರ್ಧಾರ ಮಾಡಲಾಗಿದೆ.

ಇಂದು ಸಭೆ ನಡೆಸಿದ ವಿಟ್ಲ ಅಂಗಡಿ ಮಾಲಕರು, ಆಟೋ ರಿಕ್ಷಾ, ಹೊಟೇಲ್ ಮಾಲಕರು  ಸಭೆಯಲ್ಲಿ ಸ್ವಯಂ ಪ್ರೇರಿತ ಲಾಕ್ ಡೌನ್ ನಡೆಸಲು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next