Advertisement

ಬದಲಾವಣೆ ಬಯಸುತ್ತಿದ್ದಾರೆ ಯಾದಗಿರಿ ಜನ: ಬೀರನಕಲ್‌

04:54 PM Nov 15, 2021 | Team Udayavani |

ಯಾದಗಿರಿ: ಯಾದಗಿರಿ ಮತಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಅಭಿವೃದ್ಧಿ ಬಯಸಿ ಜನರು ಜೆಡಿಎಸ್‌ ಸೇರ್ಪಡೆಯಾಗುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್‌ ಹೇಳಿದರು.

Advertisement

ಟಿ. ವಡಗೇರಾ ಗ್ರಾಮದಲ್ಲಿ ಜೆಡಿಎಸ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದಿಂದ ಜನರು ಬೇಸತ್ತಿದ್ದು, ಪ್ರತಿಯೊಂದು ಹಳ್ಳಿಯಲ್ಲಿ ಬದಲಾವಣೆ ಬಯಸುತ್ತಿದ್ದಾರೆ ಎಂದರು. ದಿನನಿತ್ಯ ತೈಲ ಬೆಲೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಒಂದಾದ ಮೇಲೋಂದು ಹಗರಣಗಳು ಮತ್ತು ಜನಸಾಮಾನ್ಯರು ಕಷ್ಟ ಅನುಭವಿಸುವ ಕಾಯ್ದೆಗಳನ್ನು ಜಾರಿಗೆ ತರುತ್ತಾ ರಾಜ್ಯದಲ್ಲಿ ಬಿಜೆಪಿ ಜನರನ್ನು ಹೈರಾಣಾಗಿಸುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ನಾಯಕರು ಕೇವಲ ಕಾಟಾಚಾರಕ್ಕಾಗಿ ಹಗರಣಗಳ ಕುರಿತು ಮಾತನಾಡುತ್ತಾ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು, ನಾಟಕೀಯ ಬೆಳವಣಿಗೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡುತ್ತಿವೆ. ಇಲ್ಲಿಯವರೆಗೆ ಬಂದಿರುವ ಯಾವ ಹಗರಣಗಳ ಕುರಿತು ಸಮಗ್ರ ತನಿಖೆ ನಡೆಯದೇ ಸರ್ಕಾರಗಳು ಜನರಿಗೆ ಕಣ್ಣೊರೆಸುವ ಕೆಲಸ ಮಾಡುತ್ತಿದ್ದರೂ ಯಾವೊಬ್ಬರು ಪ್ರಶ್ನಿಸುತ್ತಿಲ್ಲವೆಂದು ಹೇಳಿದರು.

ಈ ಸಂದರ್ಭದಲ್ಲಿ ಧರ್ಮಣ್ಣ ಟಿ. ವಡಗೇರಾ, ಮಲ್ಲಣ್ಣ ಟಿ. ವಡಗೇರಾ, ನಾಗಪ್ಪ, ಮೌನೇಶ, ಪರಮಣ್ಣ ಪೂಜಾರಿ, ಮುದುಕಪ್ಪ ತಳ್ಳಳ್ಳಿ, ಭೀಮರಾಯ ಬೊಮ್ಮನಹಳ್ಳಿ, ಖಂಡಪ್ಪ ಪಟ್ಟೆದಾರ ಸೇರಿದಂತೆ ನೂರಾರು ಯುವಕರು ಜೆಡಿಎಸ್‌ ಪಕ್ಷ ಸೇರ್ಪಡೆಯಾದರು. ತಿಮ್ಮಯ್ಯ ಪುರ್ಲೆ, ಅಯ್ಯಣ್ಣ ಕನ್ಯಾಕೌಳೂರು, ನಾಗರತ್ನ ಮೂರ್ತಿ ಅನಪೂರ, ಡಾ| ಶಫೀ ತುನ್ನೂರು, ಮಲ್ಲಿಕಾರ್ಜುನಗೌಡ ಬೀರನಕಲ್‌, ರಫಿಕ್‌ ಪಟೇಲ್‌ ಉಳ್ಳೆಸೂಗೂರು, ಹಣಮಂತ್ರಾಯಗೌಡ ತೇಕರಾಳ, ರಾಜಕುಮಾರ ಸಾಹುಕಾರ ಖಾನಾಪುರ, ರಾಜಶೇಖರ ದೊರೆ ಅನವಾರ, ಚಾಂದಪಾಷ ಕುರಕುಂದಿ ಸೇರಿದಂತೆ ಇತರರಿದ್ದರು.

Advertisement

ಕಳೆದ ಹಲವು ದಶಕಗಳಿಂದ ಯಾದಗಿರಿಯಲ್ಲಿ ಅಭಿವೃದ್ಧಿನಿಂತ ನೀರಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ಜನರು ಜೆಡಿಎಸ್‌ನತ್ತ ವಾಲುತ್ತಿದ್ದು, ಬದಲಾವಣೆ ಬಯಸಿ ನಿತ್ಯ ನಿರಂತರವಾಗಿ ಜನರು ಜೆಡಿಎಸ್‌ ಸೇರ್ಪಡೆಯಾಗುತ್ತಿರುವುದು ಖುಷಿಯ ಸಂಗತಿ. ಪಕ್ಷ ಸಂಘಟನೆಯಲ್ಲಿ ನಿತ್ಯವು ತೊಡಗಿಸಿಕೊಂಡು ಜಿಲ್ಲೆಯಲ್ಲಿ ಒಂದು ಅತಿದೊಡ್ಡ ಸಂಘಟನಾತ್ಮಕ ಪಕ್ಷವಾಗಿ ಜೆಡಿಎಸ್‌ ನಿರ್ಮಿಸುವಲ್ಲಿ ಕಾರ್ಯಕರ್ತರು ಕೂಡ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. -ಹನುಮೇಗೌಡ ಬೀರನಕಲ್‌, ರಾಜ್ಯ ಜೆಡಿಎಸ್‌ ಸಂಘಟನಾ ಕಾರ್ಯದರ್ಶಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next