Advertisement

ಮಣ್ಣು ಹೊನ್ನು ಮೆಶಿನ್ನು: ಟ್ರಾನ್ಸ್ ಪ್ಲಾಂಟರ್‌

03:53 PM Apr 20, 2020 | mahesh |

ಇದೊಂದು ಸೆಮಿ ಆಟೊಮ್ಯಾಟಿಕ್‌ ಬೀಜ ಬಿತ್ತುವ ಉಪಕರಣ. ಇದನ್ನು ತೇವ ಹಾಗೂ ಒಣ ಮಣ್ಣಿನ ಭೂಮಿಯಲ್ಲಿಯೂ ಬಳಸಬಹುದಾಗಿದೆ. ಇದು ಉದ್ದವಿರುವುದರಿಂದ, ಇದನ್ನು ಬಳಸುವಾಗ ಬೀಜ ಬಿತ್ತಲು ಬಾಗುವ ಅಗತ್ಯವಿಲ್ಲ. ಅಲ್ಲದೇ, ಮಣ್ಣನ್ನು ಸರಿಸುವ, ಕೆದಕುವ ಅಗತ್ಯವೂ ಇಲ್ಲ. ಕೊಳವೆಯಾಕಾರದ ಈ ಸಾಧನದೊಳಕ್ಕೆ ಒಬ್ಬರು ಸಸಿಗಳನ್ನು ಹಾಕುತ್ತಾ ಹೋಗಬೇಕು. ಸಾಧನವನ್ನು ಹಿಡಿದಾತ ಟ್ರಿಗರ್‌ ಒತ್ತುವ ಮೂಲಕ, ಕೊಳವೆಯೊಳಗಿರುವ ಸಸಿಯನ್ನು ನೆಲದೊಳಕ್ಕೆ ಹುಗಿಯುವಂತೆ ಮಾಡುತ್ತಾನೆ. ಈ ಸಾಧನ, ಸಿಂಗಲ್‌ ಕೋನ್‌
ಮತ್ತು ಡಬಲ್‌ ಕೋನ್‌ ಮಾದರಿಗಳಲ್ಲಿ ಲಭ್ಯವಿದೆ ಸಿಂಗಲ್‌ ಕೋನ್‌ನಲ್ಲಿ ಏಕಕಾಲಕ್ಕೆ ಒಂದು ಸಸಿಯನ್ನು ಹುಗಿಯಬಹುದು.

Advertisement

ಡಬಲ್‌ ಕೋನ್‌ಗಳಲ್ಲಿ ಒಮ್ಮೆಗೇ ಎರಡು ಸಸಿಯನ್ನು ಹುಗಿಯಬಹುದಾಗಿದೆ. ಈ ಸಾಧನ, ಸಸಿಗಳನ್ನು ಮಣ್ಣಿನೊಳಗೆ 7 ಇಂಚುಗಳಷ್ಟು ಆಳದಲ್ಲಿ ಹುಗಿಯುತ್ತದೆ. ಸಾಮಾನ್ಯವಾಗಿ ಒಂದು ಎಕರೆ ಭೂಮಿಯಲ್ಲಿ ಸಸಿ ನೆಡಲು 10- 12 ಕೆಲಸಗಾರರ ಅಗತ್ಯ ಬೀಳುತ್ತದೆ. ಸಾಂಪ್ರದಾಯಿಕ ಮಾದರಿಯಲ್ಲಿ ನೆಟ್ಟರೆ ಈ ಪ್ರಕ್ರಿಯೆ ಹೆಚ್ಚಿನ ಸಮಯ ಮತ್ತು ಮಾನವ ಶ್ರಮವನ್ನು ಬೇಡುತ್ತದೆ.
ಟ್ರಾನ್ಸ್ ಪ್ಲಾಂಟರ್‌ ಉಪಯೋಗಿಸಿದರೆ 3- 4 ಕೆಲಸಗಾರರು ಸಾಕಾಗುತ್ತದೆ. ಒಂದು ನಿಮಿಷದಲ್ಲಿ 25 ಸಸಿಗಳನ್ನು ನೆಡಬಹುದು.
ವಿಡಿಯೊ ಕೊಂಡಿ- tinyurl.com/tswzqqv

Advertisement

Udayavani is now on Telegram. Click here to join our channel and stay updated with the latest news.

Next