Advertisement

ಅವಕಾಶವನ್ನು ಕಣ್ತೆರೆದು ನೋಡಿ: ರವೀಂದ್ರನಾಥ ಠಾಗೋರ್‌

01:01 PM Sep 03, 2018 | |

‘ಅಪಾಯಗಳಿಂದ ರಕ್ಷಿಸಿಕೊಳ್ಳಲು ಪ್ರಾರ್ಥನೆ ಮಾಡಬಾರದು, ಆದರೆ ಅವುಗಳನ್ನು ಎದುರಿಸಲು ಧೈರ್ಯ ತೋರುವಂತಿರಬೇಕು’ ಹೀಗೆಂದವರು ರವೀಂದ್ರನಾಥ ಠಾಗೋರ್‌ ಅವರೂ ಶ್ರೇಷ್ಠ ಶಿಕ್ಷಕರ ಸಾಲಿನಲ್ಲಿದ್ದಾರೆ. ಯಾಂತ್ರಿಕ ರೀತಿಯ ಪಾಠ, ಪ್ರವಚನಗಳ ಬದಲಾಗಿ ಪ್ರಕೃತಿ, ಆಧ್ಯಾತ್ಮಿಕ ಕೂಗುಗಳು ಅವರ ಕವಿ ಹೃದಯವನ್ನು ಚಿಕ್ಕಂದಿನಲ್ಲೇ ಮೀಟಲು ಆರಂಭಿಸಿತ್ತು.

Advertisement

ಅಸ್ಪ್ರಶ್ಯತೆ, ಜಾತಿ, ಭೇದಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಅವರು, ಸೂರ್ಯನು ನಿನ್ನ ಜೀವನದಿಂದ ಹೊರಗೆ ಹೋದಾಗ ನೀನು ಅಳಲು ಆರಂಭಿಸಿದರೆ, ನಕ್ಷತ್ರಗಳನ್ನು ನೋಡದಂತೆ ನಿಮ್ಮ ಕಣ್ಣೀರು ನಿಮ್ಮನ್ನು ತಡೆಯುತ್ತದೆ ಎನ್ನುತ್ತಿದ್ದರು.

ನಮ್ಮ ಜೀವನದಲ್ಲೂ ನಾವು ಏನನ್ನೋ ಪಡೆಯಬೇಕು ಅಥವಾ ಗಳಿಸಬೇಕು ಎನ್ನುವ ಹಂಬಲದಲ್ಲಿರುತ್ತೇವೆ. ಆದರೆ ಅದುದಕ್ಕುವುದಿಲ್ಲ ಎಂದ ಮಾತ್ರಕ್ಕೆ ನಾವು ನಿರಾಶಿತರಾಗಬಾರದು. ಅವಕಾಶಗಳು ನಕ್ಷತ್ರದ ಮೂಲಕ ಬಂದರೂ ಬರಬಹುದು ಹಾಗಾಗಿ ಅದಕ್ಕಾಗಿ ಕಾಯಬೇಕು ಎಂದು ಜೀವನದಲ್ಲಿ ಆಸೆಯನ್ನು ಇಟ್ಟುಕೊಂಡು ನಿರಾಶರಾಗದಿರಿ ಎಂಬಂತೆ ಎಚ್ಚರಿಸುತ್ತಾರೆ. ಶಿಕ್ಷಣ ಎಂಬುದು ವಿವರಣೆ ನೀಡುವಂತದ್ದಲ್ಲ. ಅದು ನಮ್ಮ ಮನಸ್ಸಿನ ಬಾಗಿಲನ್ನು ತಟ್ಟುವಂತಿರಬೇಕು ಎನ್ನುವ ರವೀಂದ್ರನಾಥ್‌ ಠಾಗೋರರ ಮಾತುಗಳು ಇಂದಿಗೂ ಅರ್ಥಪೂರ್ಣವಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next