Advertisement

Mysuru; ಅಭಿವೃದ್ಧಿ ಕೆಲಸ ನೋಡಿ ಯದುವೀರ್‌ಗೆ ಮತ: ಪ್ರತಾಪ್‌ ಸಿಂಹ

10:47 PM Mar 19, 2024 | Team Udayavani |

ಮೈಸೂರು: ನೀವು ಕೈ ಮುಗಿದುಕೊಂಡು ಹೋದರೆ ಸಾಕು, ನಿಮ್ಮ ಎಂಪಿ 10 ವರ್ಷದಲ್ಲಿ ಬಹಳ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದಕ್ಕೆ ಮತ ಹಾಕುತ್ತೇವೆ ಎಂದು ಜನ ಹೇಳುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣ ದತ್ತ ಚಾಮರಾಜ ಒಡೆಯರ್‌ ಅವರಿಗೆ ಸಂಸದ ಪ್ರತಾಪ್‌ ಸಿಂಹ ಹೇಳಿದರು.

Advertisement

ಮಂಗಳವಾರ ಆಯೋಜಿಸಿದ್ದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು-
ಕೊಡಗು ಲೋಕಸಭಾ ಚುನಾವಣೆ
ಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ ಅವರ ಗೆಲುವು ನಿರಾಯಾಸವಾಗಿ ಆಗಲಿದ್ದು, ಇದಕ್ಕಾಗಿ ಯಾರ ನಾಮ ಬಲವೂ ಬೇಡ. ಕಳೆದ 10 ವರ್ಷಗಳಲ್ಲಿ ಕ್ಷೇತ್ರದ ಮೂಲೆ ಮೂಲೆಗಳನ್ನು ಸುತ್ತಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನರಿಗೆ ಯಾರು ಬೇಕು, ಯಾರು ಬೇಡ ಎನ್ನುವ ಭಾವನೆ ನನಗೆ ಗೊತ್ತಿದೆ. ಹೀಗಾಗಿಯೇ ನಾನು ಈ ಮಾತು ಹೇಳುತ್ತಿದ್ದೇನೆ ಎಂದರು.

1952ರಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಹಾದಿಯಾಗಿ ಎಂಪಿಗಳ ಕೆಲಸ ನೋಡಿ. ಕಳೆದ 10 ವರ್ಷಗಳಲ್ಲಿ ಮೋದಿ ಕೊಟ್ಟಿರುವ ಕೊಡುಗೆ, ಪ್ರತಾಪ್‌ ಸಿಂಹ ಮಾಡಿರುವ ಕೆಲಸ ಏನೆಂಬುದು ಗೊತ್ತಾಗುತ್ತೆ ಎಂದು ಹೇಳಿದರು. ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ ಒಡೆಯರ್‌, ಶಾಸಕ ಟಿ.ಎಸ್‌. ಶ್ರೀವತ್ಸ ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next