Advertisement

ನಿಮ್ಮದೇ ದೃಷ್ಟಿಯಲ್ಲಿ ಸಂಸ್ಕೃತಿ ನೋಡಿ

11:38 AM Jun 23, 2018 | Team Udayavani |

ಬೆಂಗಳೂರು: ಭಾರತೀಯರು ಪಾಶ್ಚಿಮಾತ್ಯರ ದೃಷ್ಟಿಕೋನದಿಂದ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ ನೋಡುವುದರಿಂದ ಇಲ್ಲಿನ ಮೂಲ ಸಂಸ್ಕೃತಿ ನಶಿಸುವ ಅಪಾಯವಿದೆ ಎಂದು ಕೃಷಿ ವಿಜ್ಞಾನಿ ಡಾ.ಕೆ.ಎನ್‌.ಗಣೇಶಯ್ಯ ಅಭಿಪ್ರಾಯಪಟ್ಟರು.

Advertisement

ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಶುಕ್ರವಾರ ನಡೆದ, ವಸಂತ ಪ್ರಕಾಶನ ಹೊರತಂದಿರುವ ರಾಜೀವ್‌ ಮಲ್ಹೋತ್ರ ಅವರ ಸಂಸ್ಕೃತಕ್ಕಾಗಿ ಹೋರಾಟ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತ ತನ್ನನ್ನು ತನ್ನ ಆಯಾಮದಿಂದಲೇ ಕಂಡುಕೊಂಡರೆ ಯಾವುದೇ ಅಪಾಯವಿರುವುದಿಲ್ಲ.

ಆದರೆ, ಅನ್ಯರು ನೀಡುವ ಕನ್ನಡಿಯಿಂದ ನೋಡಿಕೊಂಡರೆ ಇಲ್ಲಿನ ನಾಗರಿಕತೆ, ಸಂಸ್ಕೃತಿ ನಶಿಸುವ ಸಾಧ್ಯತೆ ಇರುತ್ತದೆ. ಪಾಶ್ಚಿಮಾತ್ಯರು ತಮಗೆ ಅನುಕೂಲವಾಗುವ ರೀತಿಯಲ್ಲಿ ಭಾರತದ ಸಂಸ್ಕೃತಿ ಚಿತ್ರಿಸಿ ನಮಗೆ ತೋರಿಸುತ್ತಾರೆ ಎಂದರು.

ನಿಂದನೆ ನಂಬಬೇಡಿ: ಸಂಸ್ಕೃತ ಕೆಲವೇ ಜನರ ಭಾಷೆಯಾಗಿತ್ತು. ಅದನ್ನು ವರ್ಗಭೇದಕ್ಕಾಗಿ ಬಳಸಿದರು. ರಾಮಾಯಣವನ್ನು ತನ್ನ ಶತ್ರುಗಳ ವಿರುದ್ಧ ಬಳಸಲಾಗುತ್ತಿತ್ತು ಎಂದೆಲ್ಲಾ ಆಪಾದಿಸುತ್ತಿದ್ದ ಕಾಲದಲ್ಲಿ ಭಾರತದ ಸಂಸ್ಕೃತಿ ಎಷ್ಟು ಸರ್ವ ಶ್ರೇಷ್ಠ ಸ್ಥಾನದಲ್ಲಿತ್ತು ಎಂಬುದನ್ನು ಅನೇಕರು ಸಂಶೋಧನೆ ಮಾಡಿ ಸಾಬೀತುಪಡಿಸಿದ್ದಾರೆ.

ಈ ರೀತಿ ಪಾಶ್ಚಿಮಾತ್ಯರು ಭಾರತ ಕೀಳಾಗಿ ಬಿಂಬಿಸುತ್ತಿರುತ್ತಾರೆ. ಅದನ್ನು ನಾವು ನಂಬಿದರೆ ನಾಗರಿಕತೆಯ ನಾಶ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದರು. ಹಿಂದುತ್ವದಲ್ಲಿ ಜಾತಿ ಹಾಗೂ ಅಸ್ಪೃಶ್ಯತೆ ಪದ್ಧತಿಯಿಂದಾಗಿ ಬೌದ್ಧ ಧರ್ಮ ಜನ್ಮ ತಾಳಿತು ಎನ್ನುತ್ತಾರೆ.

Advertisement

ಆದರೆ, ಬೌದ್ಧ ಧರ್ಮ 6ನೇ ಶತಮಾನದಲ್ಲಿ ಉದಯವಾದಾಗ  ಆಗಿನ್ನೂ ಅಸ್ಪೃಶ್ಯತೆ ಇರಲಿಲ್ಲ ಎಂಬುದನ್ನು ಮನಗಾಣಬೇಕು ಎಂದು ತಿಳಿಸಿದರು. ಲೇಖಕ ರಾಜೀವ್‌ ಮಲ್ಹೋತ್ರ ಮಾತನಾಡಿ, ಭಾರತೀಯ ವೈಜ್ಞಾನಿಕ ಕೊಡುಗೆ, ಸಂಸ್ಕೃತಿ, ಪೂರ್ವಪಕ್ಷ ಕುರಿತು ಈಗಾಗಲೇ ಸಿದ್ಧವಿರುವ ಪುಸ್ತಕಗಳ ಜತೆಗೆ ಇನ್ನೂ 8-10 ಪುಸ್ತಕ ಪ್ರಕಟಿಸುವ ಬಗ್ಗೆ ಚಿಂತಿಸಲಾಗುತ್ತಿದೆ.

ಆದರೆ, ಇದಕ್ಕೆ ಸಾಕಷ್ಟು ಅಧ್ಯಯನ, ಸಂಶೋಧನೆ ನಡೆಸಿ ಸಿದ್ಧತೆ ಮಾಡಬೇಕಾಗಿದ್ದು, ನುರಿತ ತಜ್ಞರು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾ.ಎಂ.ಎನ್‌.ವೆಂಕಟಾಚಲಯ್ಯ, ವಿಧಾನಪರಿಷತ್‌ ಮಾಜಿ ಸದಸ್ಯೆ ಡಾ.ಎಸ್‌.ಆರ್‌.ಲೀಲಾ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next