Advertisement

ಮಳೆಗಾಲದಲ್ಲಿ ಕೆಸರು; ಬೇಸಗೆಯಲ್ಲಿ ಧೂಳು

04:21 PM Feb 25, 2017 | Harsha Rao |

ಬಜಪೆ : ಇಲ್ಲಿನ ಬಸ್ಸು ನಿಲ್ದಾಣ ಮಳೆಗಾಲದಲ್ಲಿ ಹೊಂಡಬಿದ್ದು ಕೆಸರುಮಯವಾದರೆ, ಈಗ ಸಂಪೂರ್ಣ ಧೂಳುಮಯ.
ಈ ಧೂಳು ಏಳದಂತೆ ಆಗಾಗ್ಗೆ ನೀರು ಸಿಂಪಡಿಸಿದರೂ ಸಮಸ್ಯೆ ಬಗೆ ಹರಿಯುತ್ತಿಲ್ಲ. ಶಾಶ್ವತ ಪರಿಹಾರವಾಗಿ ಡಾಮರು ಹಾಕದಿದ್ದರೆ ಇನ್ನಷ್ಟು ದಿನ ಧೂಳೇ ಗತಿ ಎನ್ನುವಂತಾಗಿದೆ. 

Advertisement

ಈ ನಿಲ್ದಾಣಕ್ಕೆ ಒಮ್ಮೆ ಡಾಮರು ಹಾಕಲಾಗಿತ್ತು. ಆದರೆ, ಕುಡಿಯುವ ನೀರಿನ ಪೈಪು ಒಡೆದ ಕಾರಣ ಅಗೆದು ಸರಿಪಡಿಸುವಾಗ ಮತ್ತೆ ಹೊಂಡ ಮಯವಾಯಿತು. ಹಾಗಾಗಿ ಈಗ ನಡೆದಾಡಲೂ ಸಮಸ್ಯೆಯಾಗುತ್ತಿದೆ. ಮಳೆಗಾಲ ಪೂರ್ತಿ ಈ ನೀರಿನಲ್ಲೇ ಕಳೆಯಲಾಗಿತ್ತು. ಸದ್ಯಈ ಹೊಂಡಗಳನ್ನು ಮುಚ್ಚಿ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಇದರಿಂದ ಏಳುತ್ತಿರುವ ಧೂಳು ಹೊಸ ಸಮಸ್ಯೆ ಉದ್ಭವಿಸಿದೆ.

ಒಂದು ಬಸ್ಸು ಬಂದರೆ ರಪ್ಪನೆ ಧೂಳು ಮುಖಕ್ಕೆ ಆವರಿಸುತ್ತದೆ. ಇದರೊಂದಿಗೆ ರಸ್ತೆ, ಚರಂಡಿ ಕಾಮಗಾರಿಗಳೂ ನಡೆಯು ತ್ತಿರುವುದರಿಂದ ಇಡೀ ಪೇಟೆಯೇ ಧೂಳಿನಿಂದ ಆವೃತವಾದಂತಿದೆ. ಈ ಧೂಳು ಆರೋಗ್ಯದ ಮೇಲೆ ಇನ್ಯಾವ ಪರಿಣಾಮ  ಬೀರುತ್ತದೋ ಎಂಬ ಆತಂಕ ಸಾರ್ವಜನಿಕರದ್ದು.

ಪಂಚಾಯತ್‌ ಗೆ ದೂರು
ಪಂಚಾಯತ್‌ಗೆ ಈ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ. ಇದರ ಹಿನ್ನೆಲೆಯಲ್ಲಿ ನೀರು ಸಿಂಪಡಿಸಲಾಗುತ್ತಿದೆ. ಆದರೆ, ಎರಡು ಗಂಟೆ ಪರವಾಗಿಲ್ಲ. ಮತ್ತೆ ಅದೇ ಸ್ಥಿತಿ. 

ಈಗಾಗಲೇ ಕುಡಿಯುವ ನೀರಿನ ಕೊರತೆಯಾಗಿರುವುದರಿಂದ, ಇನ್ನೆಷ್ಟು ದಿನ ಧೂಳಿಗೆ ನೀರು ಹಾಕಿಯಾರು ಎಂಬುದು ಸ್ಥಳೀಯರ ಪ್ರಶ್ನೆ.

Advertisement

“ಇದು ನಮಗೆ ಅನಿವಾರ್ಯ. ಧೂಳು ಸೇವಿಸಿಯೇ ಬದುಕಬೇಕಾದ ಸ್ಥಿತಿ. ಆದರೆ ಶಾಲಾ ಮಕ್ಕಳು ಮತ್ತು ವಯಸ್ಕರಿಗೆ ಭಾರೀ ತೊಂದರೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕು’ ಎನ್ನುತ್ತಾರೆ ನಿಲ್ದಾಣದಲ್ಲಿರುವ ಟೈಮ್‌ ಕೀಪರ್‌  ಪುರುಷೋತ್ತಮ್‌ ಕೋಟ್ಯಾನ್‌.

Advertisement

Udayavani is now on Telegram. Click here to join our channel and stay updated with the latest news.

Next