ಸೇಡಂ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ 2022-23ನೇ ಸಾಲಿನ ಬಜೆಟ್ ಮಂಡನಾ ಸಭೆ ಜರುಗಿತು. ನೂತನ ಅಧ್ಯಕ್ಷೆ ಶೋಭಾ ಹೂಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 22 ಕೋಟಿ 77 ಲಕ್ಷ ರೂ. ಆದಾಯ ನಿರೀಕ್ಷೆ ಜೊತೆಗೆ 23.800ರೂ. ಉಳಿತಾಯದ ಬಜೆಟ್ ಮಂಡಿಸಲಾಯಿತು.
ಸಾರ್ವಜನಿಕರ ಸಲಹೆ-ಸೂಚನೆಗಳಿಲ್ಲದೇ ಬಜೆಟ್ ಮಂಡಿಸಲು ಮುಂದಾದ ಪುರಸಭೆ ಕ್ರಮಕ್ಕೆ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಕೆಲಹೊತ್ತು ವಿರೋಧ ವ್ಯಕ್ತಪಡಿಸಿದರು.
ಆದರೂ ಬಜೆಟ್ ಮಂಡಿಸುವ ಮೂಲಕ ಕೆಲವೇ ನಿಮಿಷಗಳಲ್ಲಿ ಅನುಮೋದನೆ ಪಡೆಯಲಾಯಿತು. ಈ ಬಾರಿಯ ಆಯವ್ಯಯದಲ್ಲಿ ಪಟ್ಟಣದ ಸೌಂದರ್ಯೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಬೀದಿ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಅನುದಾನ ನಿಗಪಡಿಸಿರುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಪ್ರಹ್ಲಾದ ಸಭೆಗೆ ತಿಳಿಸಿದರು. ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಇಲಾಖೆಯ ಹಣಮಂತ, ಸರ್ವ ಮೂಲಗಳಿಂದ ಒಟ್ಟು 22 ಕೋಟಿ 77 ಲಕ್ಷ ರೂ. ಆದಾಯ ನಿರೀಕ್ಷೆ ಮಾಡಲಾಗಿದ್ದು, ಸರಾಸರಿಯಾಗಿ 23,800ರೂ. ಉಳಿತಾಯದ ನಿರೀಕ್ಷೆ ಹೊಂದಲಾಗಿದೆ ಎಂದರು.
ಸರ್ವ ವಿಷಯಕ್ಕೂ ಅನುಮೋದನೆ ಇದೆ ಎಂದು ಸದಸ್ಯರು ಸೂಚಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಕೆರಳ್ಳಿ, ಸದಸ್ಯರಾದ ವೀರೇಂದ್ರ ರುದ್ನೂರ, ಸಿದ್ಧು ನಾಯಿಕೋಡಿ, ಶ್ರೀನಿವಾಸ ಬಳ್ಳಾರಿ, ಲಾಲು ರಾಠೊಡ, ಸಂತೋಷ ತಳವಾರ, ನಾಗಕುಮಾರ ಎಳ್ಳಿ, ರವೀಂದ್ರ ಜಡೇಕರ್, ಬಸಣ್ಣ ರನ್ನೇಟ್ಲಾ, ಆಶಾ ಜಾಧವ, ದೇವು ದೊರೆ, ಶಿವಾನಂದಸ್ವಾಮಿ, ಸುನಂದಾ ರಾಜಾಪುರ, ಮಲ್ಕಮ್ಮ ಕಣೇಕಲ್, ಸಕ್ಕುಬಾಯಿ ಪವಾರ, ಶೈರಿಬಿ, ಫಾತೀಮಾ ಅಂಜುಮ್, ಅತಿಯಾಬೇಗಂ, ಪ್ರಮಿಳಾ ಮಡಿವಾಳ, ಮಲ್ಕಪ್ಪ ಕೊಡದೂರ, ನೀಲಾಧರಶೆಟ್ಟಿ, ರಾಜುಗೌಡ್ಸ್, ಚಾಂದಬೀ ಇದ್ದರು.