Advertisement

ಭದ್ರತೆಗೆ ಸಿಸಿ ಕ್ಯಾಮೆರಾ ಕಣ್ಗಾವಲು

11:08 AM Sep 09, 2019 | Naveen |

ಶಿವಕುಮಾರ ಬಿ. ನಿಡಗುಂದಾ
ಸೇಡಂ:
ಕಳ್ಳತನ ಪ್ರಕರಣ, ಅಡ್ಡಾದಿಡ್ಡಿ ವಾಹನ ಚಾಲನೆ, ಕುಡಿದು ವಾಹನ ನಡೆಸುವವರಿಗೆ, ಕಾನೂನು ವಿರೋಧಿ ಚಟುವಟಿಕೆಗಳಿಗೆ ಬ್ರೇಕ್‌ ಬೀಳಲಿದೆ. ಏಕೆಂದರೆ ಈಗ ಪಟ್ಟಣ ಸಂಪೂರ್ಣ ಸಿಸಿ ಟಿವಿ (ಕ್ಲೋಸ್ಡ್ ಸರ್ಕ್ನೂಟ್ ಟೆಲಿವಿಜನ್‌) ಕ್ಯಾಮೆರಾ ಕಣ್ಗಾವಲಿಗೆ ಒಳಪಟ್ಟಿದೆ.

Advertisement

ಎಎಸ್ಪಿ ಅಕ್ಷಯ ಹಾಕೆ, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ ಪತ್ರಕರ್ತರೊಂದಿಗೆ ಸಮಾಲೋಚನೆಗೆ ಇಳಿದಾಗ ಪಟ್ಟಣದಲ್ಲಿ ಸಿಸಿಟಿ ಅಳವಡಿಸುವ ಬಗ್ಗೆ ಚರ್ಚೆ ನಡೆದಿದ್ದವು. ಇದನ್ನು ಸವಾಲಾಗಿ ಸ್ವೀಕರಿಸಿದ ಎಎಸ್ಪಿ ಅಕ್ಷಯ ಹಾಕೆ ಮೂರ್‍ನಾಲ್ಕು ದಿನಗಳಲ್ಲೇ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಮಾದರಿ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಇತ್ತೀಚೆಗೆ ಕಳ್ಳತನ ಪ್ರಕರಣಗಳು ಪಟ್ಟಣದಲ್ಲಿ ಹೆಚ್ಚಾದ ಪ್ರಯುಕ್ತ ಪೊಲೀಸರಿಗೆ ತಲೆನೋವಾಗಿತ್ತು. ಈಗ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಚೌರಸ್ತಾದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಕೊತ್ತಲ ಬಸವೇಶ್ವರ ದೇವಾಲಯ ರಸ್ತೆ, ಹಳೆ ಸಿನಿಮಾ ರಸ್ತೆ, ಮಸ್ಜೀದ್‌ ಏರಿಯಾ ರಸ್ತೆ, ಮುಖ್ಯ ರಸ್ತೆ, ರೈಲು ನಿಲ್ದಾಣ, ಪೊಲೀಸ್‌ ಠಾಣೆ, ಬಸ್‌ ನಿಲ್ದಾಣ, ರೆಹಮತ್‌ನಗರ ರಸ್ತೆ, ಜಿ.ಕೆ. ರಸ್ತೆಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳು ನಿಗಾ ಇಡಲಿವೆ.

13 ಕಡೆಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು
ಅಪರಾಧ ಕಡಿಮೆ ಮಾಡುವ ನಿಟ್ಟಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪುರಸಭೆ ಇದಕ್ಕೆ ಸಹಕಾರ ನೀಡಿದೆ. ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ ನಿರಂತರ ಶ್ರಮವಹಿಸಿದ್ದಾರೆ. ಊಡಗಿ ಕ್ರಾಸ್‌, ಜಿ.ಕೆ. ಕ್ರಾಸ್‌ ಸೇರಿದಂತೆ 13 ಕಡೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳು ಕೆಲಸ ಮಾಡಲಿವೆ. ಅಪಘಾತ, ಕಳ್ಳತನ, ರೌಡಿ ಚಟುವಟಿಕೆಗಳ ಮೇಲೆ ಇವು ನಿಗಾ ಇಡಲಿವೆ. ಇದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗಲಿವೆ. ಇದೇ ರೀತಿ ಚಿಂಚೋಳಿಯಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.
ಅಕ್ಷಯ ಹಾಕೆ,
  ಎಎಸ್ಪಿ, ಉಪ ವಿಭಾಗ, ಚಿಂಚೋಳಿ

ಪೊಲೀಸರ ಕಾರ್ಯಕ್ಕೆ ಶ್ಲಾಘನೆ
ಪೊಲೀಸರ ಈ ಕಾರ್ಯ ಪ್ರಶಂಸನೀಯ. ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಯಿಂದ ಕಳ್ಳರು, ಡಕಾಯಿತರಲ್ಲದೇ ಅಪಘಾತ, ಕ್ಷುಲ್ಲಕ ಕಾರಣಗಳಿಗೆ ನಡೆಯುವ ಜಗಳಗಳ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಬಹುದು. ವಿನಾಕಾರಣ ನಡೆಯುವ ಜಗಳಗಳು ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಕಡಿಮೆಯಾಗಲಿವೆ.
ರಮೇಶ ತಾಪಾಡಿಯಾ,
 ಉದ್ಯಮಿ, ಸೇಡಂ

Advertisement

Udayavani is now on Telegram. Click here to join our channel and stay updated with the latest news.