Advertisement

ಶಾಲಾ ಮಕ್ಕಳ ಸುರಕ್ಷೆ : ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸಭೆ

12:39 PM Jun 02, 2019 | Sriram |

ಮಹಾನಗರ: ಶಾಲಾ ಮಕ್ಕಳನ್ನು ವಾಹನಗಳಲ್ಲಿ ಸಾಗಿಸುವಾಗ ಅನುಸರಿಸ ಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಾರ್ಗಸೂಚಿಗಳನ್ನು ನೀಡಿದ್ದು, ಈ ಬಗ್ಗೆ ಮತ್ತು ಸಂಚಾರ ಸಂಬಂಧಿತ ಹಾಗೂ ಇತರ ಅಪರಾಧ ವಿಷಯಗಳಿಗೆ ಸಂಬಂಧಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಶನಿವಾರ ನಗರದ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆಯಿತು.

Advertisement

ಸಭೆಯಲ್ಲಿ ವಿವಿಧ ಶಾಲಾ ಆಡಳಿತ ಮಂಡಳಿಯ ಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳು, ಟ್ಯಾಕ್ಸಿ ಮತ್ತು ಬಸ್‌ ಮಾಲಕರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಲಕ್ಷ್ಮೀ ಗಣೇಶ್‌ ಅಧ್ಯಕ್ಷತೆ ವಹಿಸಿ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ಚಾಲಕ/ ಮಾಲಕರು ಅನುಸರಿಸ ಬೇಕಾದ ಮುನ್ನಚ್ಚರಿಕೆಯ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಮಾರ್ಗ ಸೂಚಿಗಳನ್ನು ವಿವರಿಸಿದರು.

ಮುಖ್ಯಾಂಶಗಳು

••ಶಾಲಾ ಆಡಳಿತದವರು ಮಕ್ಕಳನ್ನು ಪೋಷಕರು ಅಥವಾ ಹೆತ್ತವರು ನಿಯೋಜಿಸಿದ ಅಧಿಕೃತ ವ್ಯಕ್ತಿಗೆ ಮಾತ್ರ (ಗುರುತು ಚೀಟಿ ಮುಖಾಂತರ) ಹಸ್ತಾಂತರಿಸಬೇಕು. ••ಅಪ್ರಾಪ್ತ ಬಾಲಕಿಯನ್ನು ಪುರುಷ ಸಿಬಂದಿ ಜತೆ ಮಾತ್ರ ಕಳುಹಿಸಿ ಕೊಡಬಾರದು.

Advertisement

••ಶಾಲಾ ಆಡಳಿತಗಳು ಶಾಲಾ ಆವರಣದಲ್ಲಿ ಮತ್ತು ರಸ್ತೆ/ ಪ್ರವೇಶ ದ್ವಾರಕ್ಕೆ ಮುಖ ಮಾಡಿ ಸಾಕಷ್ಟು ಸಿ.ಸಿ. ಕೆಮರಾಗಳನ್ನು ಅಳವಡಿಸಬೇಕು.

••ತುರ್ತು ಸಂದರ್ಭಗಳಲ್ಲಿ ಪ್ರಾಂಶುಪಾಲರು ಹೆತ್ತವರು ಬರುವ ತನಕ ಮಗುವನ್ನು ಶಿಕ್ಷಕಿಯ ಕೈಗೊ ಪ್ಪಿಸಿ ಉಸ್ತುವಾರಿ ನೋಡಿಕೊಳ್ಳು ವಂತೆ ವ್ಯವಸ್ಥೆ ಮಾಡಬೇಕು.

••ಹಿರಿಯರ ವಿಭಾಗವನ್ನು ಕಿರಿಯರಿಂದ ಪ್ರತ್ಯೇಕಿಸಬೇಕು.

••ಶಾಲೆಗಳಲ್ಲಿ ಬಾಲಕ/ ಬಾಲಕಿಯರಿಗೆ ಪ್ರತ್ಯೇಕ ಶೌಚಾಲ ಯಗಳಿರಬೇಕು, ಬಾಲಕಿ ಯರ ಶೌಚಾಲಯದ ಮೇಲ್ವಿಚಾರಣೆಗೆ ಮಹಿಳಾ ಸಿಬಂದಿ ನೇಮಿಸಬೇಕು.

••ಶಾಲಾ ಆಡಳಿತವು ಶಿಕ್ಷಕರನ್ನು / ದೈಹಿಕ ಶಿಕ್ಷಣ ಶಿಕ್ಷಕರನ್ನು/ ಲ್ಯಾಬ್‌ ಟೆಕ್ನೀಶನ್‌/ ಚಾಲಕರು, ಇತರ ಪೂರಕ ಸಿಬಂದಿ ನೇಮಕ ಮಾಡುವಾಗ ಅವರಿಂದ ಪೊಲೀಸ್‌ ಪರಿಶೀಲನ ಪತ್ರವನ್ನು ಪಡೆಯಬೇಕು.

••ಶಾಲಾ ಆಡಳಿತವು ಸಾರಿಗೆ/ ಸೆಕ್ಯುರಿಟಿ/ ಸ್ವಚ್ಛತೆ/ ಕ್ಯಾಂಟೀನ್‌ ವಿಭಾಗಗಳಿಗೆ ಅಧಿಕೃತ ಸಂಸ್ಧೆಗಳಿಂದ ನೇಮಕ ಮಾಡಿಕೊಳ್ಳಬೇಕು.

• ಶಾಲಾ ತರಗತಿ ವೇಳೆಯಲ್ಲಿ ಆಗಮನ/ ನಿರ್ಗಮನ ದ್ವಾರಗಳಲ್ಲಿ ಪುರುಷ ಮತ್ತು ಮಹಿಳಾ ಭದ್ರತಾ ಸಿಬಂದಿಯನ್ನು ನೇಮಿಸಬೇಕು.

• ತರಗತಿ ಬಿಟ್ಟ ಬಳಿಕ ಸೆಕ್ಯುರಿಟಿ ಗಾರ್ಡ್‌ಗಳು ಎಲ್ಲ ತರಗತಿ, ಕ್ಯಾಂಪಸ್‌ ನಲ್ಲಿ ಸುತ್ತಾಡಿ ಯಾವುದೇ ಮಗು ಬಾಕಿ ಉಳಿದಿದ್ದಾರೆಯತೇ ಎನ್ನುವ ಬಗ್ಗೆ ಪರಿಶೀಲಿಸಿ ಪ್ರಾಂಶುಪಾಲರಿಗೆ ವರದಿ ಸಲ್ಲಿಸಬೇಕು.

• ಖಾಸಗಿ ತಿಚಕ್ರ/ ಚತುಶ್ಚಕ್ರ ವಾಹನ/ ಕ್ಯಾಬ್‌ಗಳಲ್ಲಿ ಬರುವ ಮಕ್ಕಳ ಬಗ್ಗೆ ಹಾಜರಾತಿ, ಗುಣ ನಡತೆ ಇತ್ಯಾದಿಗಳ ಬಗ್ಗೆ ಶಾಲಾ ಆಡಳಿತವು ಮಕ್ಕಳ ಹೆತ್ತವರಿಗೆ ಸುತ್ತೋಲೆ ಕಳುಹಿಸಬೇಕು.

• ಅನಧಿಕೃತ ವ್ಯಕ್ತಿಗಳು ಶಾಲಾ ಆವರಣಕ್ಕೆ ಬರುವ ಬಗ್ಗೆ ಶಾಲಾ ಆಡಳಿತ ಕಣ್ಗಾವಲು ಇರಿಸಬೇಕು.

• ಯಾವುದೇ ಮಕ್ಕಳಿಗೆ ಶಾಲಾ ಆಡಳಿತವು ಕತ್ತಲೆಯ ಕೋಣೆ ಯಲ್ಲಿ ಅಥವಾ ತರಗತಿಯಿಂದ ಹೊರಗೆ ಕುಳಿತು ಕೊಳ್ಳಿಸಬಾರದು.

• ಶಾಲಾ ವಾಹನಗಳಲ್ಲಿ ಯಾವುದೇ ಅನಧಿಕೃತ ವ್ಯಕ್ತಿಗಳು ಸಂಚರಿಸದಂತೆ ಚಾಲಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next