ಅಗರ್ತಲಾ: ಬಿಜೆಪಿ ಮತ್ತು ತಿಪ್ರಾ ಮೋಥಾ ಮೈತ್ರಿ ಕುರಿತು ತ್ರಿಪುರಾ ರಾಜವಂಶಸ್ಥ ಪ್ರದ್ಯೋತ್ ಮಾಣಿಕ್ಯ ದೇಬ್ ಬರ್ಮ ಅವರ ಜತೆ ಮಾತುಕತೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ತ್ರಿಪುರ ರಾಜಧಾನಿ ಅಗರ್ತಲಾಗೆ ಆಗಮಿಸಿದ್ದರು. ಈ ವೇಳೆ ಭದ್ರತಾಲೋಪವಾಗಿರುವುದು ಕಂಡುಬಂದಿದೆ.
ಅಗರ್ತಲಾದಲ್ಲಿರುವ ರಾಜ್ಯ ಸರ್ಕಾರದ ಅತಿಥಿಗೃಹದಿಂದ ಅಮಿತ್ ಶಾ ಹೊರಟಿದ್ದರು. ಈ ವೇಳೆ ಅವರೊಂದಿಗೆ ಕೇಂದ್ರ ಗೃಹಸಚಿವರ ಬೆಂಗಾವಲು ಪಡೆ ಕೂಡ ಹೊರಟಿದೆ. ಈ ವೇಳೆ ಇತರೆ ವಾಹನಗಳ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದರು.
ಜಂಕ್ಷನ್‌ನಲ್ಲಿ ನಿಂತಿದ್ದ ಟಾಟಾ ಟಿಗೋರ್ ಕಾರೊಂದು, ಪೊಲೀಸರ ಸೂಚನೆಯನ್ನು ಧಿಕ್ಕರಿಸಿ, ಅಮಿತ್ ಶಾ ಅವರ ಕಾರನ್ನು ಹಿಂಬಾಲಿಸಿದೆ. ಪೊಲೀಸರು ಕಾರನ್ನು ನಿಲ್ಲಿಸಲೂ ಪ್ರಯತ್ನಿಸಿದರೂ ಚಾಲಕ ಮುಂದೆ ಚಲಿಸಿದ್ದಾನೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭದ್ರತಾಲೋಪ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.