Advertisement

ಸೆಕ್ಯುರಿಟಿ ಗಾರ್ಡ್‌ನಿಂದ ಆಕಸ್ಮಿಕ ಗುಂಡು: ಮೂವರು ಜಖಂ

04:57 PM Jan 24, 2018 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿನ ಎಟಿಎಂ ಕಿಯೋಸ್ಕ್ ಒಂದರ ಸೆಕ್ಯುರಿಟಿ ಗಾರ್ಡ್‌ನ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಕಾರಣ ಮೂವರು ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಮಧ್ಯಾಹ್ನ  ಬಾರಾಮುಲ್ಲಾ ನಗರದಲ್ಲಿನ ಎಟಿಎಂ ಕಿಯಾಸ್ಕ್ನಲ್ಲಿ ಕರ್ತವ್ಯನಿರತನಾಗಿದ್ದ ಸೆಕ್ಯುರಿಟಿ ಗಾರ್ಡ್‌ ನ 12 ಬೋರ್‌ ಗನ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next