ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಡಾ| ಅಜಯ್ ಸಿಂಗ್ ಚೌಧರಿ ಮಾತನಾಡಿ, “ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕೇಂದ್ರ ಸರಕಾರ ಈ ಯೋಜನೆ ರೂಪಿಸಿದೆ. ಕಾರ್ಮಿಕರು ಎಷ್ಟು ಮೊತ್ತ ಪಾವತಿಸುತ್ತಾರೋ ಅಷ್ಟೇ ಮೊತ್ತವನ್ನು ಸರಕಾರ ಕೂಡ ಭರಿಸಲಿದೆ. ಇದರಿಂದ ಹಾಲು ಮಾರುವವರು, ರಿಕ್ಷಾ ಚಾಲಕರು, ಮನೆಕೆಲಸದವರು ಸೇರಿದಂತೆ ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ವರದಾನವಾಗಲಿದೆ’ ಎಂದರು.
ಉಡುಪಿ ಜಿಲ್ಲಾ ಟ್ಯಾಕ್ಸಿಮನ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಮುಖ್ಯ ಅತಿಥಿಯಾಗಿದ್ದರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಯೋಜನೆಯ ಜಿಲ್ಲಾ ವ್ಯವಸ್ಥಾಪಕ ನಿತೀಶ್ ಎಸ್. ಉಪಸ್ಥಿತರಿದ್ದರು.
ನಿರ್ಮಲಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನಿ ಗುಜರಾತ್‌ನಲ್ಲಿ ಯೋಜನೆಗೆ ರಾಷ್ಟ್ರಮಟ್ಟದಲ್ಲಿ ಚಾಲನೆ ನೀಡಿದ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
450 ಮಂದಿ ನೋಂದಣಿ
ಉಡುಪಿ ಜಿಲ್ಲೆಯಲ್ಲಿ ಫೆ. 15ರಿಂದ ನೋಂದಣಿ ಆರಂಭಿಸಲಾಗಿತ್ತು. ಮಾ. 5ರ ವರೆಗೆ 450 ಮಂದಿ ನೋಂದಾಯಿಸಿದ್ದಾರೆ.