Advertisement

ಸೆಟ್ಟೇರಿದ ಹಾರರ್ ಸಿನಿಮಾ ‘ಸೆಕ್ಟರ್ 7’

06:27 PM Apr 17, 2023 | Team Udayavani |

“ಸೆಕ್ಟರ್‌-7′ ಹೀಗೊಂದು ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಉಲ್ಲಾಳದ ಶ್ರೀಮುನೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕೃಷ್ಣರಾಜೇ ಅರಸ್‌ ಆರಂಭ ಫ‌ಲಕ ತೋರಿದರು. ಶ್ರೀಕಾಂತ್‌ ರಾಜೇ ಅರಸ್‌ ಕ್ಯಾಮೆರಾ ಚಾಲನೆ ಮಾಡಿದರು. ಬೆಂಗಳೂರು ಹಾಗೂ ಊಟಿಯಲ್ಲಿ ಚಿತ್ರೀಕರಣ ನಡೆಯಲಿದೆ.

Advertisement

ನೈಜ ಘಟನೆ ಆಧಾರಿತ ಹಾಗೂ ಹಾರರ್‌ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸಂಜೀವ್‌ ಗವಂಡಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸಂಜೀವ್‌ ಗವಂಡಿ ಅವರೇ ಬರೆದಿದ್ದಾರೆ. ಮಂಗಾಟ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ್ದ ಸಂಜೀವ್‌ ಅವರಿಗೆ ಸೆಕ್ಟರ್‌ 7 ಐದನೇ ನಿರ್ದೇಶನದ ಚಿತ್ರ.

ಎಂ.ಎಸ್‌ ಮೂವೀಸ್‌ ಲಾಂಛನದಲ್ಲಿ ಮಂಜುಳ ಅರಸ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ವಿನು ಮನಸು ಸಂಗೀತ ನೀಡುತ್ತಿದ್ದಾರೆ. ವೀರೇಶ್‌ ಛಾಯಾಗ್ರಹಣ, ಆದಿ ಆದರ್ಶ ಸಂಕಲನ ಹಾಗೂ ವಿ.ನಾಗೇಶ್‌ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

ನೂತನ ಪ್ರತಿಭೆ ಸುನೀಲ್‌ ಕುಮಾರ್‌ ಈ ಚಿತ್ರದ ನಾಯಕ. ಐಶರ್ಯಾ ನಾಯಕಿ. ನಿರ್ಮಾಪಕಿ ಮಂಜುಳ ಅರಸ್‌ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ನೇಹಾ, ನಾಗರಾಜು, ಹನುಮಂತೇ ಗೌಡ, ಗಿರೀಶ್‌ ಜತ್ತಿ, ಹೇಮಾ, ವಿನೋದ್‌ ಗೊಬ್ಬರಗಾಲ, ಚೇತನ್‌, ಮೈಕೋ ಶಿವಕುಮಾರ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next