Advertisement

ಮಹಿಳೆಯರ ನೆರವಿಗೆ ವಿಭಾಗ

06:00 AM Jul 29, 2018 | Team Udayavani |

ನವದೆಹಲಿ: ವಿದೇಶದಲ್ಲಿ ಕೌಟುಂಬಿಕ ಹಿಂಸೆ ಅಥವಾ ಇತರ ಸಮಸ್ಯೆಗಳಿಂದಾಗಿ ಭಾರತಕ್ಕೆ ತಮ್ಮ ಮಕ್ಕಳೊಂದಿಗೆ ವಾಪಸಾಗುವ ಮಹಿಳೆಯರಿಗೆ ದೂರು ದಾಖಲಿಸಲು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ವಿಭಾಗ ತೆರೆದಿದೆ. ಈ ಬಗ್ಗೆ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ವಿವರಣೆ ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಎನ್‌ಸಿಪಿಸಿಆರ್‌ ಹಾಗೂ ವಿದೇಶಾಂಗ ಇಲಾಖೆ ಸದಸ್ಯರು ಸಂಬಂಧಿತ ರಾಯಭಾರ ಕಚೇರಿಯನ್ನು ಸಂಪರ್ಕಿಸುತ್ತಾರೆ. ಸಮಸ್ಯೆ ಪರಿಹರಿಸಲು ಇವರು ಪ್ರಯತ್ನ ನಡೆಸಲಿದ್ದಾರೆ ಎಂದು ಸಚಿವೆ ಹೇಳಿದ್ದಾರೆ.

Advertisement

ಕೌಂಟುಂಬಿಕ ದೌರ್ಜನ್ಯದಿಂದಾಗಿ ಭಾರತಕ್ಕೆ ಮಕ್ಕಳೊಂದಿಗೆ ಆಗಮಿಸುವ ಮಹಿಳೆಯರನ್ನು ವಾಪಸ್‌ ಕಳುಹಿಸಬೇಕು ಎಂಬ ಅಂಶವಿದ್ದುದರಿಂದ ಹಾಗ್‌ ಕನ್ವೆನ್ಸ್ ನ್‌ಗೆ ಭಾರತ ಸಹಿ ಹಾಕಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದೇವೆ. ಅಲ್ಲಿಯವರೆಗೆ ಈ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next