ಜೊಹಾನ್ಸ್‌ಬರ್ಗ್: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಪಂದ್ಯದ ದ್ವಿತೀಯ ದಿನ 251 ರನ್ನಿಗೆ ಆಲೌಟಾಗಿದೆ. ಇದರಿಂದ ದಕ್ಷಿಣ ಆಫ್ರಿಕಾವು ಮೊದಲ ಇನ್ನಿಂಗ್ಸ್‌ನಲ್ಲಿ 69 ರನ್ ಮುನ್ನಡೆ ಪಡೆದಿದೆ.
ಈ ಮೊದಲು ಏಳು ವಿಕೆಟಿಗೆ 311 ರನ್ನುಗಳಿಂದ ದಿನದಾಟ ಆರಂಭಿಸಿದ್ದ ದಕ್ಷಿಣ ಆಫ್ರಿಕಾವು 320 ರನ್ ಗಳಿಸಿ ಆಲೌಟಾಗಿತ್ತು. ಆ ಬಳಿಕ ಆಟ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು 79 ಓವರ್ ಆಡಿ ದಿನದ ಕೊನೆಯ ಅವಧಿಯ ಆಟದ ವೇಳೆ 251 ರನ್ ಗಳಿಸಿ ಆಲೌಟಾಯಿತು. ಆ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮೂರು ಓವರ್ ಆಡಿದ್ದು, ಯಾವುದೇ ವಿಕೆಟ್ ಕಳೆದುಕೊಳ್ಳದೇ 4 ರನ್ ಗಳಿಸಿದೆ.