Advertisement
10ರ ಪೈಕಿ 8 ದೇಶಗಳಲ್ಲಿ ಈಗಾಗಲೇ ಕೊರೊನಾ 2 ಹಾಗೂ 3ನೇ ಹಂತದ ವ್ಯಾಪಿಸುವಿಕೆ ಆರಂಭವಾಗಿದೆ. ಆದರೆ ಭಾರತ ಮತ್ತು ಅರ್ಜೆಂಟೀನಾದಲ್ಲಿ ಇನ್ನೂ ಸೋಂಕು 2ನೇ ಅಲೆಗೆ ಕಾಲಿಟ್ಟಿಲ್ಲ. ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರನ್ನು ಕಂಡ 15 ದೇಶಗಳನ್ನು ಪರಿಗಣಿಸಿದರೆ, ಪೋಲೆಂಡ್‌ನಲ್ಲಿ ಇನ್ನೂ 2ನೇ ಅಲೆ ಕಾಣಿಸಿಕೊಂಡಿಲ್ಲ.
ಅಲರ್ಜಿ ಇರುವವರು ಫೈಜರ್ ಲಸಿಕೆಯಿಂದ ದೂರ ಇರಿ ಎಂದು ಬುಧವಾರ ಯು.ಕೆ. ಸರಕಾರ ತನ್ನ ಜನರಿಗೆ ಎಚ್ಚರಿಕೆ ನೀಡಿದೆ. ಇಬ್ಬರು ವ್ಯಕ್ತಿಗಳಿಗೆ ಲಸಿಕೆ ನೀಡಿದ ಬಳಿಕ ಸಮಸ್ಯೆ ತಲೆದೋರಿದ್ದರಿಂದ ಸರಕಾರ ಈ ಆದೇಶ ಹೊರಡಿಸಿದೆ.
Related Articles
ದೇಶಾದ್ಯಂತ ಲಸಿಕೆ ವಿತರಣೆಗೆ ಸಿದ್ಧತೆ ನಡೆಯುತ್ತಿರುವಂತೆಯೇ ಡಿ.10ರಿಂದ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರದ ವತಿಯಿಂದ ಪೂರೈಕೆ ಶುರುವಾಗಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ ಸದ್ಯ 85,634 ಶೀತಲೀಕರಣ ವ್ಯವಸ್ಥೆ ಇದೆ. ಅದರಲ್ಲಿ ಸಾಗಣೆ ರೀತಿಯ ಶೈತ್ಯೀಕರಣದ ಬಾಕ್ಸ್ ಮತ್ತು ಇತರ ಉಪಕರಣಗಳನ್ನು ಹೊಂದಿವೆ.
Advertisement
ಲಕ್ಷದ್ವೀಪದಲ್ಲಿ ಸೋಂಕು ಭೀತಿ ಇಲ್ಲಲಕ್ಷದ್ವೀಪದಲ್ಲಿ ಮಾತ್ರ ಸೋಂಕಿನ ಸಮಸ್ಯೆಯೇ ಇಲ್ಲವೇನೋ ಎಂಬ ಸ್ಥಿತಿ ಇದೆ. ಯಾರೂ ಕೂಡ ಮಾಸ್ಕ್ ಧರಿಸುತ್ತಿಲ್ಲ, ಸ್ಯಾನಿಟೈಸರ್‌ಗಳನ್ನು ಬಳಕೆ ಮಾಡುತ್ತಿಲ್ಲ. ಕಟ್ಟುನಿrಟ್ಟಿನ ಕೊರೊನ ನಿಯಮಗಳೇ ಇಲ್ಲಿ ಕಂಡು ಬರುತ್ತಿದೆ. ಕಾರ್ಯಕ್ರಮಗಳನ್ನು ನಡೆಸಲೂ ನಿಯಮದ ಅಡ್ಡಿ ಇಲ್ಲ. ಸಂಸದ ಪಿ.ಪಿ.ಮೊಹಮ್ಮದ್ ಫೈಜಲ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮುತುವರ್ಜಿಯಿಂದ ಕೆಲಸ ಮಾಡಿದ್ದಾರೆ. 36 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗಿತ್ತು. ಹೀಗಾಗಿ, ಒಂದೇ ಒಂದು ಪ್ರಕರಣ ದಾಖಲಾಗಲಿಲ್ಲ ಎಂದು ಸಂಸದ ಫೈಜಲ್ ಹೇಳಿದ್ದಾರೆ. ಮನೆಗೆ ಪೋಸ್ಟರ್ ಅಂಟಿಸಬೇಡಿ
ಕೊರೊನಾ ಸೋಂಕಿತರು ಎಂದು ದೃಢಪಟ್ಟವರ ಮನೆಗಳಿಗೆ ಪೋಸ್ಟರ್ ಅಂಟಿಸಬಾರದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ. ವಿಪತ್ತು ನಿರ್ವಹಣಾ ಕಾಯ್ದೆಯ ಅನ್ವಯ ಸಂಬಂಧಿಸಿದ ಅಧಿಕಾರಿ ವಿಶೇಷ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭಗಳಲ್ಲಿ ಮಾತ್ರ ಪೋಸ್ಟರ್ ಅಂಟಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ನ್ಯಾ| ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.