Advertisement
ಪ್ರಸಕ್ತ ಫಾರ್ಮ್, ಆಡಿದ ರೀತಿ, ತೋರಿದ ಜೋಶ್, ಪ್ಲೇ ಆಫ್ ಫಲಿತಾಂಶವನ್ನೆಲ್ಲ ಗಮನಿಸಿದಾಗ ಡೆಲ್ಲಿಗಿಂತ ಹೈದರಾಬಾದ್ ತಂಡವೇ ಸಾಕಷ್ಟು ಮುಂದಿರುವುದರಲ್ಲಿ ಅನುಮಾನವಿಲ್ಲ. ಅದು ನೆಚ್ಚಿನ ತಂಡವೂ ಆಗಿದೆ. ಆದರೆ ನಿರ್ದಿಷ್ಟ ದಿನದಂದು ಟಿ20ಯಲ್ಲಿ ಏನೂ ಆಗಬಹುದು. ದೊಡ್ಡದೊಂದು ಅಚ್ಚರಿಯೇ ಸಂಭವಿಸ ಬಹುದು. ಹೀಗಾಗಿ ಇಲ್ಲಿ ಯಾರನ್ನೂ ಲಘುವಾಗಿ ತೆಗೆದು ಕೊಳ್ಳುವುದು ತಪ್ಪಾಗುತ್ತದೆ.
Related Articles
Advertisement
ಇದನ್ನೂ ಓದಿ:ಆರ್‌ಸಿಬಿ ತಂಡವಾಗಿ ಆಡಲಿಲ್ಲ: ಎಲಿಮಿನೇಟರ್ ಸೋಲಿನ ಬಳಿಕ ಕೊಹ್ಲಿ ಪ್ರತಿಕ್ರಿಯೆ
ಡೆಲ್ಲಿಯ ಬೌಲಿಂಗ್ ರಬಾಡ ಮತ್ತು ನೋರ್ಜೆ ಅವರನ್ನು ಅವಲಂಬಿಸಿದೆ. ಆದರೆ ಮೊನ್ನೆ ಮುಂಬೈ ಇವರಿಬ್ಬರನ್ನೇ ಟಾರ್ಗೆಟ್ ಮಾಡಿದ್ದನ್ನು ಮರೆಯುವಂತಿಲ್ಲ. ಅಶ್ವಿನ್, ಅಕ್ಷರ್ ಸ್ಪಿನ್ ಮ್ಯಾಜಿಕ್ ನಡೆದರೆ ಲಾಭವಿದೆ. ಸ್ಯಾಮ್ಸ್ ಬದಲು ಹೆಟ್‌ಮೈರ್ ಮರಳಬಹುದು. ಆಗ ಸ್ಟೋಯಿನಿಸ್ ಪೂರ್ತಿ ಬೌಲಿಂಗ್ ಕೋಟಾವನ್ನು ನಿಭಾಯಿಸಬೇಕಾಗುತ್ತದೆ.
ಹೈದರಾಬಾದ್ ಜಯದ ಓಟ
ಇನ್ನೊಂದೆಡೆ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ಸಂಘಟಿತ ಹಾಗೂ ಯೋಜನಾಬದ್ಧ ಆಟದ ಮೂಲಕ ಆರ್‌ಸಿಬಿ ಯನ್ನು ಕೆಡವಿದೆ. ತಂಡದ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಅಮೋಘ ಮಟ್ಟದಲ್ಲಿದೆ. ಕೂಟದ ಮೊದಲಾರ್ಧದಲ್ಲಿ ಹೈದರಾಬಾದ್ ಆಟ ಕಂಡಾಗ ಅದು ಲೀಗ್ ಹಂತದಲ್ಲೇ ಉದುರಿ ಹೋಗಲಿದೆ ಎನಿಸಿತ್ತು. ಆದರೆ ವಾರ್ನರ್ ಟೀಮ್ ಸರಿಯಾದ ಹೊತ್ತಿನಲ್ಲಿ ಗೆಲುವಿನ ಮೆಟ್ಟಿಲು ಏರತೊಡಗಿದೆ.
ಸನ್‌ರೈಸರ್ ಪ್ಲಸ್ ಪಾಯಿಂಟ್
ಮೊದಲ 11 ಪಂದ್ಯಗಳಲ್ಲಿ ಹೈದರಾಬಾದ್‌ಗೆ ಒಲಿದದ್ದು ನಾಲ್ಕೇ ಜಯ. ಆದರೆ ಇಲ್ಲಿಂದ ಮುಂದೆ ಎಸ್‌ಆರ್‌ಎಚ್ ಮುಟ್ಟಿದ್ದೆಲ್ಲ ಗೆಲುವಾಗಿ ಪರಿವರ್ತನೆ ಆಗುತ್ತಲೇ ಬಂದಿದೆ. 3ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧವೇ ಕೂಟದ ಮೊದಲ ವಿಜಯೋತ್ಸವ ಆಚರಿಸಿದ್ದ ವಾರ್ನರ್ ಪಡೆ, 12ನೇ ಪಂದ್ಯದಲ್ಲಿ ಮತ್ತೆ ಡೆಲ್ಲಿಯನ್ನು ಮಣಿಸಿ ಅಜೇಯ ಓಟ ಬೆಳೆಸಿದೆ. ಅರ್ಥಾತ್, ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಅದು ಡೆಲ್ಲಿಯನ್ನು ಮಗುಚಿದೆ. ಇದು ಕೂಡ ಹೈದರಾಬಾದ್‌ಗೆ ಪ್ಲಸ್ ಪಾಯಿಂಟ್.
ವಾರ್ನರ್, ವಿಲಿಯಮ್ಸನ್, ಪಾಂಡೆ, ಆಲ್‌ರೌಂಡರ್ ಹೋಲ್ಡರ್, ಸಂದೀಪ್ ಶರ್ಮ, ರಶೀದ್ ಖಾನ್, ಟಿ. ನಟರಾಜನ್ ಅವರೆಲ್ಲ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಗರ್ಗ್, ಸಮದ್ ಮೇಲೂ ನಂಬಿಕೆ ಇಡಬಹುದು. ಕಳೆದ ಪಂದ್ಯದಿಂದ ಹೊರಗುಳಿದಿದ್ದ ಗಾಯಾಳು ಸಾಹಾ ಇನ್ನೂ ಚೇತರಿಸಿಕೊಂಡಿಲ್ಲ ಎಂಬುದಷ್ಟೇ ಬ್ಯಾಡ್ ನ್ಯೂಸ್.