ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 11ರಿಂದ 20ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯು ಅನುತ್ತೀರ್ಣ ವಿದ್ಯಾರ್ಥಿಗಳಿಗಾಗಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಸೋಮವಾರ ಬಿಡುಗಡೆ ಮಾಡಿದೆ.
ಇಲಾಖೆಯ ವೆಬ್‌ಸೈಟ್
//pue.kar.nic.in/ ನಲ್ಲಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಲಭ್ಯವಿದೆ. ಜೂ.11ರಂದು ಸಮಾಜಶಾಸ್ತ್ರ, ಅಕೌಂಟೆನ್ಸಿ ಹಾಗೂ ಗಣಿತ, 12ರಂದು ಇಂಗ್ಲಿಷ್, 13ರಂದು ಅರ್ಥಶಾಸ್ತ್ರ, ಭೌತಶಾಸ್ತ್ರ, 14ರಂದು ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, 15ರಂದು ಕನ್ನಡ, 17ರಂದು ಲಾಜಿಕ್, ಬಿಜಿನಸ್ ಸ್ಟಡೀಸ್, ರಸಾಯನಶಾಸ್ತ್ರ, ಶಿಕ್ಷಣ, 18ರಂದು ಇತಿಹಾಸ, ಸ್ಟಾಟಸ್ಟಿಕ್ಸ್, ಜೀವಶಾಸ್ತ್ರ, 19ರಂದು ರಾಜ್ಯಶಾಸ್ತ್ರ ಮತ್ತು ಮೂಲಗಣಿತ, 20ರಂದು ಹಿಂದಿ ಪರೀಕ್ಷೆ ನಡೆಯಲಿದೆ ಎಂದು ಪಿಯು ಇಲಾಖೆ ಪ್ರಕಟಣೆ ತಿಳಿಸಿದೆ.
ದಾಖಲಾತಿ ದಿನಾಂಕ ವಿಸ್ತರಣೆ: ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯು 2019-20ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸಿದೆ. ಯಾವುದೇ ದಂಡಶುಲ್ಕ ಇಲ್ಲದೆ ಜೂನ್ 12ರವರೆಗೂ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. 670 ರೂ. ದಂಡಶುಲ್ಕದೊಂದಿಗೆ ಜೂನ್ 24ರವರೆಗೂ ದಾಖಲಾತಿ ಪಡೆಯಬಹುದು. 2,890 ರೂ.ವಿಶೇಷ ದಂಡಶುಲ್ಕದೊಂದಿಗೆ ಜುಲೈ 5ರವರೆಗೂ ದಾಖಲಾತಿ ಪಡೆಯಲು ಅವಕಾಶ ಇದೆ ಎಂದು ಪಿಯು ಇಲಾಖೆ ನಿರ್ದೇಶಕಿ ಸಿ.ಶಿಖಾ ಮಾಹಿತಿ ನೀಡಿದರು.